ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಸಿಗಂದೂರು ಸೇತುವೆ ಮೇಲಿನಿಂದ ಹಾರಿ ಆತ್ಮಹತ್ಯೆಗೆ ವ್ಯಕ್ತಿಯೊಬ್ಬ ಯತ್ನಿಸಿರುವಂತ ಘಟನೆ ನಡೆದಿದೆ.
ಕೆಲ ತಿಂಗಳ ಹಿಂದಷ್ಟೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡಿತ್ತು. ತೂಗು ಸೇತುವೆ ನೋಡೋದಕ್ಕೆ ದಿನಂ ಪ್ರತಿ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಮೈಸೂರಿನಿಂದ ಆಗಮಿಸಿದಂತ ಆಂಜನೇಯ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿದು ಬಂದಿದೆ.
ಮೈಸೂರಿನ ಆಂಜನೇಯ ಲೆಕ್ಕಪರಿಶೋಧಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವೈಯಕ್ತಿಕ ವಿಚಾರಕ್ಕೆ ಆಂಜನೇಯ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಮಾಹಿತಿ ತಿಳಿದು ಬಂದಿದೆ.
ಸಿಗಂದೂರು ಸೇತುವೆಯ ಮೇಲೆ ನಿಂತಿದ್ದ ಆಂಜನೇಯ ಆತ್ಮಹತ್ಯೆಗೆ ಯತ್ನಿಸಿದ ವೇಳೆಯಲ್ಲಿ ಇಂಜಿನಿಯರ್ ರಂಜೇಶ್ ರಕ್ಷಿಸಿದ್ದಾರೆ. ಕೂಡಲೇ 112ಗೆ ಕರೆ ಮಾಡಿ ಇಂಜಿನಿಯರ್ ರಂಜೇಶ್ ಮಾಹಿತಿ ನೀಡಿದ್ದಾರೆ.
ಇಂಜಿನಿಯರ್ ರಂಜೇಶ್ ಸಮಯ ಪ್ರಜ್ಞೆಯಿಂದ ಆಂಜನೇಯ ಜೀವ ಉಳಿದಿದೆ. ವಿಚಾರಣೆ ವೇಳೆಯಲ್ಲಿ ಆಂಜನೇಯ ಸ್ಲೀಪಿಂಗ್ ಮಾತ್ರೆ ನುಂಗಿದ್ದಾಗಿ ತಿಳಿದು ಬಂದಿದೆ. ಆತನಿಗೆ ಬ್ಯಾಕೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸಾಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎನ್ನಲಾಗುತ್ತಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯ 2.5 ವರ್ಷಗಳಲ್ಲಿ ದಾಖಲೆಯ 93,925 ಉದ್ಯೋಗ ಸೃಷ್ಟಿ
‘ಡಿಜಿಟಲ್ ಅರೆಸ್ಟ್’ ವಂಚನೆ: 1 ಕೋಟಿ ರೂ. ಕಳೆದುಕೊಂಡ 82 ವರ್ಷದ ವ್ಯಕ್ತಿ | Digital arrest scam








