ಬಾಗಲಕೋಟೆ: ಕಬ್ಬಿನ ಬಾಕಿ ಬಿಲ್ ಪಾವತಿಗೆ ರೈತರ ಪ್ರತಿಭಟನೆ ಕಿಚ್ಚು ಸ್ಪೋಟಗೊಂಡಿದೆ. ಟ್ರ್ಯಾಕ್ಟರ್, ಬೈಕ್ ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಲಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಸಕ್ಕರೆ ಕಾರ್ಖಾನೆ ಮುಂದೆ ನಿಲ್ಲಿಸಿದ್ದಂತ 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಿಗೆ ರೈತರು ಬೆಂಕಿ ಇಟ್ಟು ಆಕ್ರೋಶವನ್ನು ಹೊರ ಹಾಕಿದ್ದಾರೆ. ಮುಧೋಳದ ಸೈದಾಪುರ ಗೋದಾವರಿ ಸಕ್ಕರೆ ಕಾರ್ಖಾನೆಯ ಮುಂದೆ ಈ ಘಟನೆ ನಡೆದಿದೆ.
ಪ್ರತಿ ಟನ್ ಕಬ್ಬಿಗೆ 3,500 ಘೋಷಿಸುವಂತೆಯೂ ಆಗ್ರಹಿಸುತ್ತಿರುವಂತ ಕಬ್ಬು ಬೆಳೆಗಾರರು, ಮುಧೋಳದ ಸಮೀರವಾಡಿಯ ಗೋದಾವರಿ ಕಾರ್ಖಾನೆ ಬಳಿ ನಿಲ್ಲಿಸಿದ್ದಂತ ಟ್ರ್ಯಾಕ್ಟರ್, ಬೈಕ್ ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಅಂದಹಾಗೇ ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ 3,200 ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಗೆ 50 + ಸರ್ಕಾರದಿಂದ 50 ರೂಪಾಯಿ ಸೇರಿದಂತೆ ರೂ.3,300 ನೀಡಲು ನಿರ್ಧರಿಸಿತ್ತು. ಆದರೇ ಕಬ್ಬು ಬೆಳೆಗಾರರರು ರೂ.3,500 ಪ್ರತಿ ಟನ್ ಕಬ್ಬಿಗೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
‘BEd ವ್ಯಾಸಂಗ’ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: ‘ದಾಖಲೆಗಳ ಪರಿಶೀಲನೆ’ಗೆ ಮತ್ತೊಂದು ಅವಕಾಶ








