ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಹೊರಗೆ ಹೊದ್ರೆ ಸಾಕು ಸನ್ ಟ್ಯಾನ್ ಆಗುತ್ತದೆ.ಸೂರ್ಯನ ನೇರಳಾತೀತ ಕಿರಣಗಳು ನಿಮ್ಮ ಚರ್ಮವನ್ನು ನೇರವಾಗಿ ಸ್ಪರ್ಶಿಸುವುದರಿಂದ ಸನ್ ಟ್ಯಾನ್, ಸನ್ ಬರ್ನ್ನಂತಹ ಸಮಸ್ಯೆಗಳು ಉಂಟಾಗುತ್ತದೆ.
BIG BREAKING NEWS: ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ ಮುರುಘಾ ಶ್ರೀಗಳ ಡಿಸ್ಚಾರ್ಜ್
ನಿಮ್ಮ ಮುಖ, ತೋಳುಗಳು, ಕೈಗಳು, ಕುತ್ತಿಗೆ, ಬೆನ್ನು ಮತ್ತು ಪಾದಗಳು ಸನ್ ಟ್ಯಾನ್ಗೆ ಒಳಗಾಗುತ್ತವೆ. ಟ್ಯಾನ್ ಹೋಗಲಾಡಿಸಲು ಕೆಲವು ಮನೆಮದ್ದು ಇಲ್ಲಿದೆ ನೋಡಿ.
BIG BREAKING NEWS: ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ ಮುರುಘಾ ಶ್ರೀಗಳ ಡಿಸ್ಚಾರ್ಜ್
* ಟೊಮೆಟೊ ಹಣ್ಣಿನ ಚೂರನ್ನು ಟ್ಯಾನ್ ಆದ ಪ್ರದೇಶಗಳ ಮೇಲೆ ಉಜ್ಜುವುದರಿಂದ ಸನ್ ಟ್ಯಾನ್ ಕಡಿಮೆಯಾಗುತ್ತದೆ. ಇದನ್ನು ಕೆಲವು ದಿನಗಳ ವರೆಗೆ ಮಾಡಿದರೆ ಇದು ಚರ್ಮದ ಟೋನ್ ಅನ್ನು ಬದಲಾಯಿಸುತ್ತದೆ.
* ಎರಡು ಟೇಬಲ್ ಸ್ಪೂನ್ ಜೇನುತುಪ್ಪಕ್ಕೆ ಚಿಟಿಕೆ ಅರಿಶಿನ ಪುಡಿ ಮತ್ತು ಒಂದು ಟೇಬಲ್ ಸ್ಫೂನ್ ಹಾಲಿನ ಪುಡಿಯನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮುಖ ಸೇರಿದಂತೆ ಟ್ಯಾನ್ ಆದ ಜಾಗಕ್ಕೆ ಹಚ್ಚಿ ಮತ್ತು ಅದು ಒಣಗುವವರೆಗೆ ಬಿಡಿ.
BIG BREAKING NEWS: ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ ಮುರುಘಾ ಶ್ರೀಗಳ ಡಿಸ್ಚಾರ್ಜ್
* ಓಟ್ಸ್ ಮತ್ತು ಮಜ್ಜಿಗೆ ಮಿಶ್ರಣವನ್ನು ತಯಾರಿಸಿ ಟ್ಯಾನ್ ಆದ ಜಾಗಕ್ಕೆ ಉಜ್ಜಬೇಕು. ಓಟ್ಸ್ ತ್ವಚೆಯನ್ನು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ.
* ಕಪ್ಪು ಮತ್ತು ಬಿಳಿ ಜೀರಿಗೆಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಹಾಲು ಅಥವಾ ಹಾಲಿನ ಕೆನೆಯೊಂದಿಗೆ ದಪ್ಪ ಪೇಸ್ಟ್ ಮಾಡಿ. ಪೇಸ್ಟ್ ಅನ್ನು ಮುಖದ ಮೇಲೆಲ್ಲಾ ಹಚ್ಚಿಕೊಳ್ಳಿ. 20 ನಿಮಿಷಗಳ ನಂತರ ತೊಳೆಯಿರಿ. ಹೆಚ್ಚಿನ ಪರಿಣಾಮಕ್ಕಾಗಿ ವಾರಕ್ಕೆ ಕನಿಷ್ಠ ಎರಡು ಬಾರಿ ಈ ಮಾಸ್ಕ್ ಬಳಸಿ.