ಕೆಎನ್ ಎನ್ ನ್ಯೂಸ್ ಡೆಸ್ಕ್ : ಮುಟ್ಟಿನ ನೋವು ತುಂಬಾ ನೋವು ಆಗುತ್ತದೆ. ಕೆಲವು ಮಹಿಳೆಯರಿಗಂತು ನೋವು ತುಂಬಾ ಕೆಟ್ಟದ್ದಾಗಿರುತ್ತದೆ. ತೀವ್ರವಾದ ನೋವಿನಿಂದಾಗಿ ಅವರಿಗೆ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಹ ಕಷ್ಟವಾಗುತ್ತದೆ.
ಗರ್ಭಾಶಯದಲ್ಲಿನ ಸಂಕೋಚನದ ಕಾರಣದಿಂದ ಮುಟ್ಟಿನ ಸೆಳೆತಗಳು ಸಂಭವಿಸುತ್ತವೆ. ಇದರಿಂದಾಗಿ ಕೆಳ ಹೊಟ್ಟೆ, ಕೆಳ ಬೆನ್ನು, ತೊಡೆಸಂದು ಮತ್ತು ಮೇಲಿನ ತೊಡೆಯವರೆಗೂ ನೋವು ವಿಸ್ತರಿಸಬಹುದು. ಅದನ್ನು ಅನುಭವಿಸುವವರಿಗೆ ಮಾತ್ರ ಆ ನೋವು ಏನೆಂಬುದು ಗೊತ್ತಿರುತ್ತದೆ. ಇನ್ನೂ ಕೆಲವು ಮಹಿಳೆಯರಿಗೆ ಆ ನೋವಿನ ಜೊತೆ ತಲೆನೋವು, ವಾಕರಿಕೆ ಮತ್ತು ವಾಂತಿ ಕೂಡ ಆಗುತ್ತದೆ.ನೀವು ತೀವ್ರವಾದ ಮುಟ್ಟಿನ ನೋವನ್ನು ಅನುಭವಿಸುತ್ತಿದ್ದರೆ ಇದಕ್ಕೆ ಪರಿಹಾರವಾಗಿ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಋತುಚಕ್ರದ ವೇಳೆ ಉಂಟಾಗುವ ನೋವು ತಡೆಗಟ್ಟಲು ಆಯುರ್ವೇದ ವೈದ್ಯೆ ಡಾ. ದೀಕ್ಷಾ ಭಾವಸರ್ ಅವರು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
1. ಸೂರ್ಯನ ಮೊದಲು ಅಥವಾ ಸೂರ್ಯನೊಂದಿಗೆ ಎದ್ದೇಳಿ. ಸೂರ್ಯೋದಯದ ನಂತರ ನಿಮ್ಮ ಉಪಹಾರ ಮತ್ತು ಸೂರ್ಯಾಸ್ತವಾದ ಬಳಿಕ ಒಂದು ಗಂಟೆಯ ಮೊದಲು ನಿಮ್ಮ ರಾತ್ರಿಯ ಊಟವನ್ನು ಮಾಡಿ. ಇದು ಹಾರ್ಮೋನ್ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಮೈಂಡ್ ಕೂಡ ಫ್ರೀ ಇರುತ್ತದೆ ಎನ್ನುತ್ತಾರೆ ಡಾ. ದೀಕ್ಷಾ ಭಾವಸರ್.
2. ಕೆಫೀನ್ ಅನ್ನು ತಪ್ಪಿಸಿ. ಅದರ ಬದಲಾಗಿ ಪ್ರತಿದಿನ ಬೆಳಗ್ಗೆ ನೆನಸಿದ ಒಣದ್ರಾಕ್ಷಿ, ಬಾದಾಮಿ, ಶೇಂಗಾ, ಖರ್ಜೂರ ಅಥವಾ ಅಂಜೂರ ಸೇವಿಸಿ.
3. ಪ್ರತಿನಿತ್ಯ ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ. ಯೋಗಾಸನವನ್ನು ಮಾಡುವುದರಿಂದ ಒತ್ತಡ ಕಡಿಮೆಯಾಗುವುದರ ಜೊತೆ ಅದು ನಿಮ್ಮ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ. ದೇಹದಲ್ಲಿ ರಕ್ತ ಪರಿಚಲನೆಯನ್ನು ಸಹ ಸುಧಾರಿಸುತ್ತದೆ. ಮಾನಸಿಕವಾಗಿಯೂ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಪ್ರಾಣಾಯಾಮದ ಜೊತೆ ವಜ್ರಾಸನ, ಬಾಲಾಸನ, ಭದ್ರಾಸನ, ಶವಾಸನದಂತಹ ಆಸನಗಳು ಮುಟ್ಟಿನ ಅವಧಿಗಳಲ್ಲಿ ಸೂಕ್ತವಾಗಿವೆ. ಅವು ದೇಹಕ್ಕೆ ವಿಶ್ರಾಂತಿ ನೀಡುತ್ತವೆ. ಕೆಲವರಿಗೆ ಈ ಆಸನಗಳು ನಿಮ್ಮ ನೋವನ್ನು ತಕ್ಷಣವೇ ಕಡಿಮೆ ಮಾಡುತ್ತದೆ.
4. ಹೈಡ್ರೇಟೆಡ್ ಆಗಿರಿ
ಮುಟ್ಟಿನ ವೇಳೆ ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುತ್ತ ಸದಾ ಹೈಡ್ರೇಟೆಡ್ ಆಗಿರಿ. ನೀರಿನ ಜೊತೆ ಪುದೀನ ಚಹಾ, ಮೆಂತ್ಯ ಚಹಾ ಸಹ ಕುಡಿಯಿರಿ. ಇದು ನಿಮ್ಮ ನೋವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.