ಬೆಂಗಳೂರು : ಇಂದಿನಿಂದ ಸಿಇಟಿ ಅಂಕ ದಾಖಲಾತಿ ಪೋರ್ಟಲ್ ಸಕ್ರಿಯಗೊಳಿಸಲಾಗಿದ್ದು, ಸಿಬಿಎಸ್‌ಇ, ಐಸಿಎಸ್‌ಇ ೧೨ ನೇ ತರಗತಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಅಂಕ ದಾಖಲಿಸುವುದು ಕಡ್ಡಾಯಗೊಳಿಸಿದೆ.
ಯುಜಿಸಿಇಟಿ-2024 – 12ನೇ ತರಗತಿಯನ್ನು ಸಿಬಿಎಸ್ ಸಿ / ಸಿಐಎಸ್‌ಸಿಇ / ಐಜಿಸಿಎಸ್‌ಇ ಮುಂತಾದ ಸಂಸ್ಥೆಗಳಿಂದ ತೇರ್ಗಡೆ ಹೊಂದಿದವರು ಅಂಕಗಳನ್ನು ದಾಖಲಿಸುವುದು ಹಾಗು ನಾಟಾ ಅಂಕಗಳನ್ನು ದಾಖಲಿಸುವುದು. 12ನೇ ತರಗತಿಯನ್ನು ಸಿಬಿಎಸ್ ಇ, (ಜಮ್ಮು ಮತ್ತು ಕಾಶ್ಮೀರ ಸೇರಿ) ಸಿಐಎಸ್‌ಸಿಇ, 10+2, ಐಜಿಸಿಎಸ್‌ಇ ಮತ್ತಿತರ ಬೋರ್ಡುಗಳಲ್ಲಿ 2024 ರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಆನ್‌ಲೈನ್ ಪೋರ್ಟಲ್ ಲಿಂಕ್ ಅನ್ನು 14-05-2024 ರಿಂದ ತೆರೆಯಲಾಗುವುದು. ಅಂತಹ ಎಲ್ಲ ಅಭ್ಯರ್ಥಿಗಳು 20-05-2024 ರೊಳಗಾಗಿ ಕಡ್ಡಾಯವಾಗಿ ತಮ್ಮ 12ನೇ ತರಗತಿಯ ಅಂಕಗಳ ವಿವರಗಳನ್ನು ಕೆಇಎ ಪೋರ್ಟಲ್ ಮೂಲಕ ನಿಗದಿತ ಲಿಂಕ್‌ನಲ್ಲಿ ಅಂಕಗಳನ್ನು ದಾಖಲಿಸಲು ಮತ್ತು ಮಾರ್ಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಅಪ್ ಲೋಡ್ ಮಾಡಲು ಸೂಚಿಸಿದೆ. 2024 ಕ್ಕಿಂತ ಮೊದಲೇ ಹಿಂದಿನ ವರ್ಷಗಳಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಮತ್ತು 12ನೇ ತರಗತಿಯನ್ನು ಉತ್ತೀರ್ಣರಾಗಿರುವವರೂ ಸಹ ಅಂಕಗಳನ್ನು ದಾಖಲಿಸಲು ಸೂಚಿಸಿದೆ.
ಅರ್ಹತಾ ಕಂಡಿಕೆ ‘Clause-Y’ ಅನ್ನು ಆಯ್ಕೆ ಮಾಡಿರುವ ಅಭ್ಯರ್ಥಿಗಳೂ ಸಹ ಅಂಕಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಬೇಕು. ಕರ್ನಾಟಕ ದ್ವಿತೀಯ ಪಿಯುಸಿ 2024ರ ಅಂಕಗಳನ್ನು ಪ್ರಾಧಿಕಾರವು ನೇರವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನೇರವಾಗಿ ಪಡೆದುಕೊಳ್ಳುತ್ತದೆ.
ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2024 ರ ನಾಟಾ ಪರೀಕ್ಷೆಯ ಅಂಕಗಳನ್ನು ಅರ್ಹತೆಯ ಅನುಗುಣವಾಗಿ ದಾಖಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ಗೆ ಭೇಟಿ ನೀಡಲು ಕೋರಿದೆ.