ಹೈದರಾಬಾದ್ : ತಾನು ನಡೆಸತ್ತಿದ್ದ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಕರ ಸಂಖ್ಯೆ ಕಡಿಮೆಯಾಗಿದ್ದಕ್ಕೆ ಮನನೊಂದು ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಐದನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹೈದರಾಬಾದಿನ ಸೈದಾಬಾದ್ನಲ್ಲಿ ನಡೆದಿದೆ.
ಚಂದ್ರಶೇಖರ್ ಧೀನಾ (22) ಆತ್ಮಹತ್ಯೆ ಮಾಡಿಕೊಂಡು ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ IIITM ಗ್ವಾಲಿಯರ್ನಲ್ಲಿ ಇಂಜಿನಿಯರಿಂಗ್ ನಾಲ್ಕನೇ ವರ್ಷವನ್ನು ಪೂರ್ಣಗೊಳಿಸಿದ್ದರು. ಕೆಲ ದಿನಗಳ ಹಿಂದೆ ರಜೆಗಾಗಿ ಮನೆಗೆ ಮರಳಿದ್ದರು. ಮನೆಯಲ್ಲಿ, ಅವರು ನಾಲ್ಕು ವರ್ಷಗಳ ಹಿಂದೆ ಅವರು ಪ್ರಾರಂಭಿಸಿದ ತನ್ನ ಯೂಟ್ಯೂಬ್ ಚಾನೆಲ್ ಸೆಲ್ಫ್ಲೋನಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ಗೇಮಿಂಗ್ ಆಡಿ ಕಾಲ ಕಳೆಯುತ್ತಿದ್ದ ಎನ್ನಲಾಗುತ್ತಿದೆ.
ಯುವಕ ಆತ್ಮಹತ್ಯೆ ಮಾಡಿಕೊಳ್ಳವ ಮೊದಲು ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ಧೀನಾ ಅವರು ಬಾಲ್ಯದಲ್ಲಿ ಅನುಭವಿಸಿರುವುದನ್ನು ಬರೆದಿದ್ದಾರೆ. ನಾನು ಬಾಲ್ಯದಿಂದಲೂ ನನ್ನ ಜೀವನದುದ್ದಕ್ಕೂ ಅನುಭವಿಸಿದ್ದೇನೆ. ನಾನು ಪ್ರಪಂಚದೊಂದಿಗೆ ಬೇರೆಯಾಗುವ ಸಮಯ ಬಂದಿದೆ. ಏಕೆಂದರೆ ಈ ಖಿನ್ನತೆ, ದುಃಖ ಮತ್ತು ಕೋಪದ ಕುಣಿಕೆಯಲ್ಲಿ ಸಿಲುಕಿರುವುದನ್ನು ನಾನು ಇನ್ನು ಮುಂದೆ ಸಹಿಸಲಾರೆ. ಇನ್ಮುಂದೆ ನಾನು ಬ್ರಹ್ಮಾಂಡವನ್ನು ವಿನ್ಯಾಸಗೊಳಿಸಿದವರ ಈ ‘ಪ್ರಯೋಗ’ದ ಭಾಗವಾಗಿರಲು ಸಾಧ್ಯವಿಲ್ಲ ಎಂದು ಬರೆದಿದ್ದಾನೆ.
ಯುವಕ ತನ್ನ ಹೆತ್ತವರೊಂದಿಗೆ ಯಾವುದೇ ಸಮಯ ಕಳೆದಿಲ್ಲ ಮತ್ತು ನೆರೆಹೊರೆಯವರೊಂದಿಗೆ ಎಂದಿಗೂ ಸಂವಹನ ನಡೆಸಲಿಲ್ಲ. ಈತ ಖಿನ್ನತೆಗೆ ಒಳಗಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.