ಬೀದರ್: ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
BREAKING NEWS: ಬಾಗಲಕೋಟೆಯಲ್ಲಿ ತಂದೆಯ ಭೀಕರ ಹತ್ಯೆ: ದೇಹವನ್ನು 30 ಪೀಸ್ ಮಾಡಿ ಬಾವಿಗೆ ಎಸೆದ ಪಾಪಿ ಮಗ
18 ವರ್ಷದ ವಿನೋದ್ ಅತಿವಾಳ ಸಾವನ್ನಪ್ಪಿದ ದುರ್ವೈವಿ ವಿದ್ಯಾರ್ಥಿ. ವಿನೋದ್ ಶಾಲಾ ಸಾಮಗ್ರಿಗಳನ್ನು ತರಲು ಸೈಕಲ್ ಮೇಲೆ ಹೋಗುತ್ತಿದ್ದ. ಈ ವೇಳೆ ಕಲ್ಲು ತುಂಬಿದ ಲಾರಿ ವಿದ್ಯಾರ್ಥಿ ವಿನೋದ್ ಮೇಲೆ ಹರಿದಿದೆ. ಇದರ ಪರಿಣಾಮ ವಿನೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆಗೆ ಸಂಬಂಧಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಕಿಡಿಕಾರಿದರು. ಈ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.