ಹೈದರಾಬಾದ್ : ಹೈದರಾಬಾದ್ನ ಮಲಕ್ಪೇಟ್ ಪ್ರದೇಶದಲ್ಲಿ ಶಬರಿಮಲೆಗೆ ಅಯಪ್ಪ ಮಾಲೆ ಧರಿಸಿದ್ದಕ್ಕಾಗಿ ವಿದ್ಯಾರ್ಥಿಯೊಬ್ಬನಿಗೆ ಶಾಲೆಗೆ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ ಎನ್ನಲಾಗಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
Job Alert: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ಹೈದರಾಬಾದ್ನ ಹಳೆ ಮಲಕ್ಪೇಟ್ನಲ್ಲಿರುವ ಮೋಹನ್ ಗ್ರಾಮರ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದ ವಿದ್ಯಾರ್ಥಿಗೆ ಅವಕಾಶ ನೀಡಲಿಲ್ಲ ಎಂದು ಅಯ್ಯಪ್ಪ ಸ್ವಾಮಿ ಸಮಿತಿ ಆರೋಪಿಸಲಾಗಿದೆ. ಈ ಘಟನೆಯನ್ನು ಖಂಡಿಸಿದ ಅಖಿಲ ಭಾರತ ದೀಕ್ಷಾ ಪ್ರಚಾರಕ ಸಮಿತಿಯ ರಾಷ್ಟ್ರೀಯ ಪ್ರಚಾರಕ ಕಾರ್ಯದರ್ಶಿ ಪ್ರೇಮ್ ಗಾಂಧಿ, ನಾವು ಶಬರಿಮಲೆಗೆ ಮಾಲೆ ಧರಿಸುತ್ತಿದ್ದೇವೆ. ಯಾರಾದರೂ ತಡೆಯಲು ಪ್ರಯತ್ನಿಸಿದರೆ, ನಾವು ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
Job Alert: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ತೆಲಂಗಾಣದಾದ್ಯಂತ ಕ್ರಿಶ್ಚಿಯನ್ ಮಿಷನರಿಗಳು ಮತ್ತು ಇತರ ಧರ್ಮಗಳಿಗೆ ಸೇರಿದ ಖಾಸಗಿ ಶಾಲೆಗಳು ಅನಾಗರಿಕರಂತೆ ವರ್ತಿಸುತ್ತಿವೆ. ಅವರು ಅಯ್ಯಪ್ಪ ಮಾಲೆ ಧರಿಸುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇಂದು 1,000 ಅಯ್ಯಪ್ಪ ಸ್ವಾಮಿ ಭಕ್ತರೊಂದಿಗೆ ನಾವು ಶಾಲೆಯ ಮುಂದೆ ಪ್ರತಿಭಟನೆ ನಡೆಸುದ್ದೇವೆ. ಆಗ ಇದಕ್ಕೆ ಶಾಲೆಯ ಅಧಿಕಾರಿಗಳು ಸ್ಪಂದಿಸಿ ಮಕ್ಕಳಿಗೆ ಅಯ್ಯಪ್ಪ ಮಾಲೆ ಹಾಕಲು ಅವಕಾಶ ನೀಡಬೇಕು ಎಂದು ಪ್ರೇಮ್ ಗಾಂಧಿ ಹೇಳಿದರು.
Job Alert: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ಶಬರಿಮಲೆಗೆ ಮಾಲೆ ಧರಿಸುವುದು ರಾಜ್ಯಾದ್ಯಂತ ಎಲ್ಲೆಡೆ ನಡೆಯುತ್ತಿದೆ. ಆದ್ದರಿಂದ ಯಾವುದೇ ತೊಂದರೆಯಿಲ್ಲದೆ ಎಲ್ಲರಿಗೂ ಅವಕಾಶ ನೀಡುವಂತೆ ನಾವು ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.
Job Alert: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ಘಟನೆಯ ಕುರಿತು ಮಾತನಾಡಿದ ಚಂದರ್ ಘಾಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೈ ಪ್ರಕಾಶ್ ರೆಡ್ಡಿ, ಇಂದು ವಿದ್ಯಾರ್ಥಿಯೊಬ್ಬ ಚಪ್ಪಲಿ ಹಾಕದೆ ಅಯ್ಯಪ ಮಾಲೆ ಮತ್ತು ಖಾಂಡ್ವ ಧರಿಸಿ ಶಾಲೆಗೆ ಹೋಗಿದ್ದಾನೆ. ಇದಕ್ಕೆ ಆಡಳಿತ ಮಂಡಳಿಯವರು ಖಾಂಡ್ವಾ ಇಲ್ಲದೆಯೂ ಬರಬಹುದು ಎಂದು ಸೂಚಿಸಿದ್ದರು. ಸುಮಾರು 10 ಮಂದಿ ಶಾಲೆಗೆ ತೆರಳಿ ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿದಿದೆ. ಇದು ತಪ್ಪು ತಿಳುವಳಿಕೆಯಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.