ಹರಿಯಾಣ: ರೋಹ್ಟಕ್ನ ಮಹರ್ಷಿ ದಯಾನಂದ್ ವಿಶ್ವವಿದ್ಯಾಲಯದ (ಎಂಡಿಯು) ಕ್ಯಾಂಪಸ್ನಲ್ಲಿ ಶನಿವಾರ ಸಂಜೆ ನಾಲ್ವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಬೋಧಕರ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿದ ನಂತರ ಕ್ಯಾಂಪಸ್ ನಿಂದ ನಿರ್ಗಮಿಸಿದ ಕೇವಲ 90 ನಿಮಿಷಗಳ ನಂತರ ಈ ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆಯಲ್ಲಿ ಒಬ್ಬ ಎಂಡಿಯು ವಿದ್ಯಾರ್ಥಿ ಗಾಯಗೊಂಡಿದ್ದು, ಗಾಯಗೊಂಡ ಇತರ ಮೂವರು ಅವನ ಸ್ನೇಹಿತರು ಎಂದು ವರದಿಯಾಗಿದೆ.
ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೂಟೌಟ್ ಗೆ ಪ್ರಾಥಮಿಕ ಕಾರಣ ಹಣಕಾಸಿನ ವಿವಾದವೆಂದು ತೋರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.