ಗುರುಗ್ರಾಮ್: ಆಸ್ಪತ್ರೆಗೆ ತೆರಳುತ್ತಿದ್ದ ಮಾರ್ಗದಲ್ಲಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ ತುಂಬು ಗರ್ಭಿಣಿ ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ಗುರುಗ್ರಾಮ್ನಲ್ಲಿ ನಡೆದಿದೆ.
ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆಯನ್ನು ಕಾರಿನಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಾಕೋಬ್ಪುರದಿಂದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ವಾಹನ ದಟ್ಟನೆ ಹೆಚ್ಚಾಗಿತ್ತು. ಹೀಗಾಗಿ ಕಾರು ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿತ್ತು. ಇತ್ತ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗುತ್ತಿತ್ತು.
ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೇ ಹೆರಿಗೆ ನೋವು ಹೆಚ್ಚಾಗಿ ಮಹಿಳೆ ಆಲ್ಟೋ ಕಾರಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವೇಳೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಹಿಳೆ ನೆರವಿಗೆ ಧಾವಿಸಿದ್ದರು ಎನ್ನಲಾಗುತ್ತಿದೆ.
Viral News : ವ್ಯಕ್ತಿಯೊಬ್ಬ ಹಸುವಿಗೆ ಕಾಲಿನಲ್ಲಿ ತುಳಿದು , ಬಾಲವನ್ನು ತಿರುಚುತ್ತಾನೆ : ಅಘಾತಕಾರಿ Video | Watch