ನವದೆಹಲಿ: ಇಂದು ನವೀಕರಿಸಿದ ಆಕಾಶ್ ವೆಪನ್ ಸಿಸ್ಟಮ್ ಪರೀಕ್ಷೆಯು ಯಶಸ್ವಿಯಾಗಿದೆ. ಆ ಮೂಲಕ ದೇಶದ ರಕ್ಷಣೆಗೆ ಮತ್ತಷ್ಟು ಬಲ ಬಂದಂತೆ ಆಗಿದೆ.
ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಡಿ ಆರ್ ಡಿ ಓ, ಆಕಾಶ್ ವೆಪನ್ ಸಿಸ್ಟಮ್‌ನ ನವೀಕರಿಸಿದ ರೂಪಾಂತರವಾದ ಆಕಾಶ್ ಪ್ರೈಮ್, ಲಡಾಖ್ ಸೆಕ್ಟರ್‌ನಲ್ಲಿ ಹೆಚ್ಚಿನ ಎತ್ತರದಲ್ಲಿ ಪ್ರಯೋಗಗಳ ಸಮಯದಲ್ಲಿ ಎರಡು ವೈಮಾನಿಕ ಹೈ ಸ್ಪೀಡ್ ಮಾನವರಹಿತ ಗುರಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿತು ಎಂದಿದೆ.
ಶಸ್ತ್ರಾಸ್ತ್ರ ವ್ಯವಸ್ಥೆಯನ್ನು 4500 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿ ಕಾರ್ಯನಿರ್ವಹಿಸಲು ಕಸ್ಟಮೈಸ್ ಮಾಡಲಾಗಿದೆ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆರ್‌ಎಫ್ ಸೀಕರ್ ಸೇರಿದಂತೆ ಇತ್ತೀಚಿನ ನವೀಕರಣಗಳನ್ನು ಹೊಂದಿದೆ ಎಂಬುದಾಗಿ ತಿಳಿಸಿದೆ.
Akash Prime the upgraded variant of Akash Weapon System successfully engaged and destroyed two Aerial High Speed Unmanned targets during trials at high altitude in Ladakh Sector. The weapon system is customised to operate in altitude above 4500 meters and has latest upgrades… pic.twitter.com/OL1qYLZF1S
— DRDO (@DRDO_India) July 17, 2025
ಬೆಂಗಳೂರಲ್ಲಿ ‘ರೌಡಿ ಶೀಟರ್ ಬಿಕ್ಲು ಶಿವ ಕೊಲೆ’ ಪ್ರಕರಣಕ್ಕೆ ಸ್ಪೋಟಕ ತಿರುವು
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!