ತುಮಕೂರು : ಅತ್ತೆ ಮಾವ ಹಾಗು ಪತಿಯ ಕಿರುಕುಳಕ್ಕೆ ಬೇಸತ್ತು ಸೊಸೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ನೋಡಿದ್ದೇವೆ ಕೇಳಿದ್ದೇವೆ. ಆದರೆ ಇದೀಗ ತುಮಕೂರಲ್ಲಿ ಕಾರೆಕುರ್ಚಿ ಗ್ರಾಮದಲ್ಲಿ ಸೊಸೆ ಕಾಟಕ್ಕೆ ಬೇಸತ್ತು ಅತ್ತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಾರೆಕುರ್ಚಿ ಗ್ರಾಮದಲ್ಲಿ ಮಗನನ್ನು ತನ್ನಿಂದ ದೂರ ಮಾಡ್ತಾರೆಂಬ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಬೆಳಿಗ್ಗೆ ಅನುಮಾನಸ್ಪದ ಸ್ಥಿತಿಯಲ್ಲಿ ಭ್ರಮರಾಂಬಿಕ ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಭ್ರಮರಂಭಿಕ (60) ಶವ ಪತ್ತೆಯಾಗಿದೆ. ಬಳಿಕ ಚೇಳೂರು ಠಾಣೆ ಪೊಲೀಸರಿಗೆ ಕುಟುಂಬ ಮಾಹಿತಿ ನೀಡಿದೆ. ಅತ್ತೆ ಭ್ರಮರಂಭಿಕ ಸಾವಿಗೆ ಸೊಸೆಯೇ ಕಾರಣ ಎಂಬ ಆರೋಪ ಕೇಳಿಬಂದಿದೆ.
ಸೊಸೆ ಕಾವ್ಯಶ್ರೀ ಪ್ರತ್ಯೇಕವಾಗಿ ಉಳಿಯಲು ಬಯಸಿದ್ದಳು. ಅಡುಗೆ ಸೇರಿ ಎಲ್ಲವನ್ನು ಪ್ರತ್ಯೇಕವಾಗಿ ಮಾಡಿಕೊಳ್ತೀದ್ದಳು. ಗಂಡನನ್ನು ಬೆಂಗಳೂರಿಗೆ ಕರೆದೋಯ್ಯಲು ಮಾತನಾಡುತ್ತಿದ್ದ ಆರೋಪ ಸಹ ಕೇಳಿಬಂದಿದೆ. ಈ ಮಾತಿನಿಂದ ನೊಂದು ಅತ್ತೆ ಭ್ರಮರಂಭಿಕ ಆತ್ಮಹತ್ಯೆ ಆರೋಪ ಕೇಳಿಬಂದಿದೆ. ಆತ್ಮಹತ್ಯೆಗೆ ಪ್ರೇರಣೆ ಪ್ರಕಾರಣದಡಿ ಸೊಸೆ ಕಾವ್ಯಶ್ರೀ ವಿರುದ್ಧ ಚೇಳೂರು ಠಾಣೆಯಲ್ಲಿ FIR ದಾಖಲಾಗಿದೆ.








