ನವದೆಹಲಿ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಹೆಚ್ಚುತ್ತಿರುವ ಹಿಂಸಾಚಾರ ಮತ್ತು ನಾಗರಿಕರ ದಬ್ಬಾಳಿಕೆಗೆ ಭಾರತ ತೀವ್ರವಾಗಿ ಪ್ರತಿಕ್ರಿಯಿಸಿದೆ. ಪಾಕಿಸ್ತಾನ ಮತ್ತೊಮ್ಮೆ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಸಮಸ್ಯೆಯನ್ನ ಎತ್ತಿದ್ದಕ್ಕೆ ಭಾರತ ತನ್ನ ಪ್ರತ್ಯುತ್ತರ ನೀಡುವ ಹಕ್ಕನ್ನು ಚಲಾಯಿಸಿದೆ. ತನ್ನ ಅಕ್ರಮ ಆಕ್ರಮಣದಲ್ಲಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯನ್ನ ತಕ್ಷಣವೇ ನಿಲ್ಲಿಸುವಂತೆ ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
“ಜಮ್ಮು ಮತ್ತು ಕಾಶ್ಮೀರದ ಜನರು ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಅನುಸಾರವಾಗಿ ತಮ್ಮ ಮೂಲಭೂತ ಹಕ್ಕುಗಳನ್ನ ಚಲಾಯಿಸುತ್ತಾರೆ. ಆದರೆ ಈ ಹಕ್ಕುಗಳು ಪಾಕಿಸ್ತಾನಕ್ಕೆ ಪರಕೀಯ ಪರಿಕಲ್ಪನೆಯಾಗಿ ಉಳಿದಿವೆ” ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರವತ್ನೇನಿ ಹೇಳಿದರು. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಅವರು ಪುನರುಚ್ಚರಿಸಿದರು. ಇನ್ನೀದು ಮೊದಲು ಬದಲಾಗಿಲ್ಲ, ಈಗ ಬದಲಾಗುವುದಿಲ್ಲ ಮತ್ತು ಎಂದಿಗೂ ಬದಲಾಗುವುದಿಲ್ಲ ಎಂದರು.
ಪಿಒಕೆಯಲ್ಲಿ ದಂಗೆಯ ಪರಿಸ್ಥಿತಿ ಇದೆ.!
ಪಾಕಿಸ್ತಾನವು ತನ್ನ ಸೇನೆಯ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದ ಜನರನ್ನ ದಮನಿಸುತ್ತಿದೆ ಎಂದು ಹರೀಶ್ ಪರ್ವತ್ನೇನಿ ಹೇಳಿದ್ದಾರೆ. ಪಾಕ್ ಮಿಲಿಟರಿ ದಬ್ಬಾಳಿಕೆ ಮತ್ತು ಸಂಪನ್ಮೂಲಗಳ ಅಕ್ರಮ ಶೋಷಣೆಯ ವಿರುದ್ಧ ಪಿಒಕೆ ಜನರು ಈಗ ಬಹಿರಂಗ ದಂಗೆ ಎದ್ದಿದ್ದಾರೆ ಎಂದು ಅವರು ಹೇಳಿದರು. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತ್ನೇನಿ, “ಪಾಕಿಸ್ತಾನವು ತನ್ನ ಅಕ್ರಮ ಆಕ್ರಮಣದಲ್ಲಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯನ್ನ ನಿಲ್ಲಿಸಬೇಕು, ಅಲ್ಲಿ ಜನರು ಅದರ ಮಿಲಿಟರಿ ಕ್ರೌರ್ಯ ಮತ್ತು ಶೋಷಣೆಯನ್ನ ಪ್ರತಿಭಟಿಸಲು ಬೀದಿಗಿಳಿದಿದ್ದಾರೆ” ಎಂದು ಹೇಳಿದರು.
BIG NEWS: ಬೆಂಗಳೂರಿನ ‘ಪರಪ್ಪನ ಅಗ್ರಹಾರ ಜೈಲಿ’ನಲ್ಲಿ ಕೈದಿಗಳಿಗೆ ಮುಂದುವರೆದ ‘ರಾಜಾತಿಥ್ಯ’
ಹಿಟ್ ಅಂಡ್ ರನ್, ಬ್ಲ್ಯಾಕ್ ಮೇಲ್ ಮಾಡುವುದಲ್ಲ, ದಾಖಲೆ ಸಹಿತ ಬಹಿರಂಗ ಚರ್ಚೆಗೆ ಬನ್ನಿ: HDKಗೆ ಡಿಕೆಶಿ ಸವಾಲ್








