ಉತ್ತರಕನ್ನಡ : ಕೋಮುವಾದಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳನ್ನು ಸೋಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಹಾಗಾಗಿ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ತಡೆದು ಸಂವಿಧಾನವನ್ನು ಉಳಿಸಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
BREAKING : ದಾವಣಗೆರೆಯಲ್ಲಿ ‘ಪಾನಿ ಪುರಿ’ ಸೇವಿಸಿ 19 ಮಕ್ಕಳು ಅಸ್ವಸ್ಥ ಕೇಸ್ : ಓರ್ವ ಬಾಲಕ ಸಾವು
ಹಿಂದೆ ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತರುತ್ತೇವೆ ಎಂದು ಜನರನ್ನ ಮರುಳು ಮಾಡಿದ್ದರು. ಅಧಿಕೃತ ಅಧಿಕಾರ ಉಪಯೋಗಿಸಿ ದರೋಡೆ ಮಾಡಿದ್ದರು. ನರೇಂದ್ರ ಮೋದಿ ಸರ್ಕಾರ ಹಿಟ್ಲರ್‌ಗಿಂತ ಕೆಟ್ಟ ಸರ್ಕಾರವಾಗಿದೆ. ಬಿಜೆಪಿಯ ಸರ್ವಾಧಿಕಾರಿ ಧೋರಣೆಯಿಂದ ಮುಂದೊಂದು ದಿನ ದೇಶದಲ್ಲಿ ಚುನಾವಣೆಯೂ ಮಾಯವಾಗುತ್ತದೆ. ಹೀಗಾಗಿ ಆಮ್ ಆದ್ಮಿ ಫಾರ್ಟಿ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದೆ ಎಂದರು.
BREAKING : ಚಿಕ್ಕಬಳ್ಳಾಪುರದಲ್ಲಿ ‘ವಿದ್ಯುತ್ ತಂತಿ’ ತಗುಲಿ ಬಾಲಕ ದಾರುಣ ಸಾವು
ಸಂವಿಧಾನವನ್ನೇ ಬದಲಾಯಿಸುವ ಹೇಳಿಕೆ ನೀಡಿದ ಅನಂತ ಕುಮಾರ್ ಹೆಗಡೆ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಿಜೆಪಿಯ ನಿರ್ಧಾರವೂ ಸಂವಿಧಾನ ಬದಲಾವಣೆಯೇ ಆಗಿದೆ. ಮತ್ತೊಮ್ಮೆ ಹೆಗ್ಡೆಗೆ ಟಿಕೆಟ್ ನೀಡಿದರೆ ಬಿಜೆಪಿ ನಿರ್ಧಾರ ಖಚಿತವಾಗುತ್ತದೆ. ಇದೀಗ ರಾಮ, ಧರ್ಮದ ಹೆಸರಿನಲ್ಲಿ ಚುನಾವಣೆ ನಡೆಸುತ್ತಿದ್ದಾರೆ. ಪೌರತ್ವ ಕಾಯ್ದೆಯನ್ನು ಚುನಾವಣೆಯ ಸಂದರ್ಭದಲ್ಲಿ ಜಾರಿಗೆ ತಂದಿದ್ದಾರೆ. ವಿವಿಧ ಕಾನೂನುಗಳನ್ನು ತಂದು ಮುಖ್ಯ ನ್ಯಾಯಾಧೀಶರನ್ನೇ ಇಳಿಸಿದ್ದಾರೆ. ಇ.ಡಿ. ಯನ್ನು ಉಪಯೋಗಿಸಿ ಪಕ್ಷಕ್ಕೆ ಹಣ ಸಂಗ್ರಹಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಬೆಂಗಳೂರಿನ ‘ನೀರಿನ ಟ್ಯಾಂಕರ್’ ಮಾಲೀಕರಿಗೆ ಮಹತ್ವದ ಮಾಹಿತಿ: ಈ ‘ಸ್ಟಿಕ್ಕರ್’ ಅಂಟಿಸುವುದು ಕಡ್ಡಾಯ