Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಶಿಥಿಲಗೊಂಡ ಆಸ್ಪತ್ರೆ ಕಟ್ಟಡಗಳ ತೆರವಿಗೆ ಸರ್ಕಾರ ಸೂಚನೆ: 15 ದಿನದೊಳಗೆ ವರದಿ ಸಲ್ಲಿಕೆಗೆ ಆದೇಶ

05/05/2026 7:38 PM

ಕರ್ತವ್ಯದ ಅವಧಿಯಲ್ಲೇ ಮಧ್ಯಪಾನ ಮಾಡಿದ ‘ಡಾಕ್ಟರ್’ಗೆ ಶಾಕ್: ಬಸವನ ಬಾಗೇವಾಡಿಯ ವಂದಲಾ PHC ವೈದ್ಯ ಸಸ್ಪೆಂಡ್

05/05/2026 7:34 PM

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ವಿಜಯ್ ಹಕ್ಕು ಮಂಡನೆ: ಬಹುಮತ ಸಾಬೀತುಪಡಿಸಲು 2 ವಾರ ಕಾಲಾವಕಾಶ ಕೋರಿದ ‘ದಳಪತಿ’!

05/05/2026 7:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶೀಘ್ರವೇ ನೂತನ “ಜೈವಿಕ ಇಂಧನ ನೀತಿ 2025-30” ಅನುಷ್ಠಾನಕ್ಕೆ ಕ್ರಮ: ಎಸ್‌.ಈ.ಸುಧೀಂದ್ರ
KARNATAKA

ಶೀಘ್ರವೇ ನೂತನ “ಜೈವಿಕ ಇಂಧನ ನೀತಿ 2025-30” ಅನುಷ್ಠಾನಕ್ಕೆ ಕ್ರಮ: ಎಸ್‌.ಈ.ಸುಧೀಂದ್ರ

By kannadanewsnow0927/05/2025 10:57 AM

ಬೆಂಗಳೂರು: “ನೂತನ ಜೈವಿಕ ಇಂಧನ ನೀತಿ”ಯ ಕಾರ್ಯಯೋಜನೆ ರೂಪಿಸುತ್ತಿದ್ದು, ಶೀಘ್ರವೇ ಈ ನೀತಿಯನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್.ಈ ಸುಧೀಂದ್ರ ತಿಳಿಸಿದರು.

ಮಂಡಳಿಯ 42 ನೇ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಉದ್ದೇಶಿತ ಜೈವಿಕ ಇಂಧನ ನೀತಿ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಜೈವಿಕ ಇಂಧನ ಬಳಕೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಸಂಬಂಧ ನೂತನ ಜೈವಿಕ ಇಂಧನ ನೀತಿಯನ್ನೂ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ನೀತಿಯನ್ನು ಅನುಷ್ಠಾನಗೊಳಿಸುವ ಮೂಲಕ ಜೈವಿಕ ಇಂಧನಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡುವಂತೆ ಮಾಡಲಾಗುವುದು ಎಂದು ಹೇಳಿದರು. ಇದೇ ವೇಳೆ 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಕೃಷ್ಣನ್‌, ಜಾಗತಿಕ ಮಟ್ಟದಲ್ಲಿ ಜೈವಿಕ ಇಂಧನಗಳ ಕುರಿತ ಸ್ಥಿತಿಗತಿ, ಉತ್ಪಾದನೆ, ಪೂರೈಕೆ ಹಾಗೂ ಬೇಡಿಕೆಯ ಕುರಿತು ವಿಷಯ ಮಂಡಿಸಿದರು. ಜೈವಿಕ ಇಂಧನ ಕ್ಷೇತ್ರದಲ್ಲಿ ಬಯೋಬ್ರಿಕೆಟ್ಸ್‌,ಬಯೋಪಿಲೆಟ್ಸ್‌, ಕಂಪ್ರೆಸ್ಡ್‌ ಬಯೋಗ್ಯಾಸ್‌, ಬಯೋಮಾಸ್‌ ಆಧಾರಿತ ಗ್ರೀನ್‌ ಹೈಡ್ರೋಜನ್‌ ಮುಂತಾದವುಗಳು ಅಟೋಮೊಬೈಲ್‌ ಸ್ಥಳೀಯ ಸಂಸ್ಥೆಗಳಲ್ಲಿನ ವಿದ್ಯುತ್‌ ಬೇಡಿಕೆಗಳನ್ನು ಸುಧಾರಿಸುವಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬಯೋಡೀಸೆಲ್‌ ಉತ್ಪಾದನೆಗೆ ಬೀಜಗಳ ಸಂಗ್ರಹಣೆಗೆ ಕ್ರಮ

ರಾಜ್ಯದಲ್ಲಿ ಬಯೋಡೀಸಲ್‌ ಉತ್ಪಾದನೆಗೆ ಅವಶ್ಯ ತೈಲ ಬೀಜಗಳಾದ ಹೊಂಗೆ, ಬೇವು, ಹಿಪ್ಪೆ ಸೀಮರೂಬ ಇತ್ಯಾದಿಗಳ ಸಂಗ್ರಹಣೆ ಉಪ ಸಮಿತಿ ರಚಿಸಲು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು. ಈ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ್‌.ಎಲ್‌, ಸದಸ್ಯರುಗಳಾದ, ಕೆ.ಕ್ರಿಷನ್‌, ದಿವಾಕರ್‌ ರಾವ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಉಪ ಕಾರ್ಯದರ್ಶಿಗಳಾದ ಎಂ.ಎಂ.ರಾಜು, ಡಿಸಿಎಫ್‌ ಮತ್ತು ತಾಂತ್ರಿಕ ಅಧಿಕಾರಿ ಲೋಹಿತ್‌ ಬಿ.ಆರ್‌, ಸಲಹೆಗಾರರುಗಳಾದ ಭರತ್‌ ಸುಬ್ರಮಣ್ಯಂ, ನಿಮ್ಮನ್‌ ದೀಪಿ ಸಿಂಗ್‌, ಸಂತೋಷ್‌ ಬಿ.ಎಲ್‌, ಡಾ.ದಯಾನಂದ ಜಿ.ಎನ್‌, ಅರಣ್ಯ ಇಲಾಖೆಯ ಡಿಸಿಎಫ್‌ ರಮೇಶ್‌ ಬಿ.ಆರ್, ಕೆಎಸ್‌ಆರ್‌ಟಿಸಿ, ಕೆಎಸ್‌ಸಿಎಸ್‌ಟಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಶಿಥಿಲಗೊಂಡ ಆಸ್ಪತ್ರೆ ಕಟ್ಟಡಗಳ ತೆರವಿಗೆ ಸರ್ಕಾರ ಸೂಚನೆ: 15 ದಿನದೊಳಗೆ ವರದಿ ಸಲ್ಲಿಕೆಗೆ ಆದೇಶ

05/05/2026 7:38 PM2 Mins Read

ಕರ್ತವ್ಯದ ಅವಧಿಯಲ್ಲೇ ಮಧ್ಯಪಾನ ಮಾಡಿದ ‘ಡಾಕ್ಟರ್’ಗೆ ಶಾಕ್: ಬಸವನ ಬಾಗೇವಾಡಿಯ ವಂದಲಾ PHC ವೈದ್ಯ ಸಸ್ಪೆಂಡ್

05/05/2026 7:34 PM1 Min Read

ಚರ್ನೋಬಿಲ್ ಕಣ್ಣೆದುರಿಗಿದೆ, ಕೈಗಾ ಹೋರಾಟದ ವಿಫಲತೆ ಬೇಸೂರಿನಲ್ಲಿ ಮರುಕಳಿಸದಿರಲಿ: ಎಚ್.ಬಿ.ರಾಘವೇಂದ್ರ

05/05/2026 7:23 PM1 Min Read
Recent News

ರಾಜ್ಯದಲ್ಲಿ ಶಿಥಿಲಗೊಂಡ ಆಸ್ಪತ್ರೆ ಕಟ್ಟಡಗಳ ತೆರವಿಗೆ ಸರ್ಕಾರ ಸೂಚನೆ: 15 ದಿನದೊಳಗೆ ವರದಿ ಸಲ್ಲಿಕೆಗೆ ಆದೇಶ

05/05/2026 7:38 PM

ಕರ್ತವ್ಯದ ಅವಧಿಯಲ್ಲೇ ಮಧ್ಯಪಾನ ಮಾಡಿದ ‘ಡಾಕ್ಟರ್’ಗೆ ಶಾಕ್: ಬಸವನ ಬಾಗೇವಾಡಿಯ ವಂದಲಾ PHC ವೈದ್ಯ ಸಸ್ಪೆಂಡ್

05/05/2026 7:34 PM

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ವಿಜಯ್ ಹಕ್ಕು ಮಂಡನೆ: ಬಹುಮತ ಸಾಬೀತುಪಡಿಸಲು 2 ವಾರ ಕಾಲಾವಕಾಶ ಕೋರಿದ ‘ದಳಪತಿ’!

05/05/2026 7:31 PM
BREAKING NEWS

ಗಂಗಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಡಬಲ್ ಡೆಕ್ಕರ್ ಬಸ್, 18 ಪ್ರಯಾಣಿಕರಿಗೆ ಗಂಭೀರ ಗಾಯ

05/05/2026 7:23 PM
State News
KARNATAKA

ರಾಜ್ಯದಲ್ಲಿ ಶಿಥಿಲಗೊಂಡ ಆಸ್ಪತ್ರೆ ಕಟ್ಟಡಗಳ ತೆರವಿಗೆ ಸರ್ಕಾರ ಸೂಚನೆ: 15 ದಿನದೊಳಗೆ ವರದಿ ಸಲ್ಲಿಕೆಗೆ ಆದೇಶ

By kannadanewsnow0905/05/2026 7:38 PM KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆ ಮತ್ತು ಗಾಳಿಯ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಶಿಥಿಲಗೊಂಡ ಹಳೆಯ…

ಕರ್ತವ್ಯದ ಅವಧಿಯಲ್ಲೇ ಮಧ್ಯಪಾನ ಮಾಡಿದ ‘ಡಾಕ್ಟರ್’ಗೆ ಶಾಕ್: ಬಸವನ ಬಾಗೇವಾಡಿಯ ವಂದಲಾ PHC ವೈದ್ಯ ಸಸ್ಪೆಂಡ್

05/05/2026 7:34 PM

ಚರ್ನೋಬಿಲ್ ಕಣ್ಣೆದುರಿಗಿದೆ, ಕೈಗಾ ಹೋರಾಟದ ವಿಫಲತೆ ಬೇಸೂರಿನಲ್ಲಿ ಮರುಕಳಿಸದಿರಲಿ: ಎಚ್.ಬಿ.ರಾಘವೇಂದ್ರ

05/05/2026 7:23 PM

ಸಾಗರದ ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ: ತಕ್ಷಣ ಕೈಬಿಡುವಂತೆ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಆಗ್ರಹ

05/05/2026 7:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.