ಬೆಂಗಳೂರು : ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ_ಕ್ಯಾಂಟೀನ್ ಗಳಿಗೆ ಅನುದಾನ ನೀಡದೆ. ರಾಜ್ಯ ಸರ್ಕಾರ ಬಡವರ ಹೊಟ್ಟೆಗೆ ಹೊಡೆಯಲು ಹೊರಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ_ಕ್ಯಾಂಟೀನ್ ಗಳಿಗೆ ಅನುದಾನ ನೀಡದೆ.ರಾಜ್ಯ ಸರ್ಕಾರ ಬಡವರ ಹೊಟ್ಟೆಗೆ ಹೊಡೆಯಲು ಹೊರಟಿದೆ. 2017-2018, 2018-19ರಲ್ಲಿ ಕ್ರಮವಾಗಿ ರೂ.100 ಮತ್ತು ರೂ.145 ಕೋಟಿ ಅನುದಾನ ನೀಡಿದ್ದ ಬಿಬಿಎಂಪಿ ಈ ವರ್ಷ ಕೊಟ್ಟಿದ್ದು ಕೇವಲ ರೂ.60 ಕೋಟಿ ರೂ. ಕೊಟ್ಟಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಪ್ರಾರಂಭಿಸಿದ್ದ #ಇಂದಿರಾ_ಕ್ಯಾಂಟೀನ್ ಗಳಿಗೆ ಅನುದಾನ ನೀಡದೆ @BJP4Karnataka ಸರ್ಕಾರ ಬಡವರ ಹೊಟ್ಟೆಗೆ ಹೊಡೆಯಲು ಹೊರಟಿದೆ.
2017-2018, 2018-19ರಲ್ಲಿ ಕ್ರಮವಾಗಿ ರೂ.100 ಮತ್ತು ರೂ.145 ಕೋಟಿ ಅನುದಾನ ನೀಡಿದ್ದ ಬಿಬಿಎಂಪಿ ಈ ವರ್ಷ ಕೊಟ್ಟಿದ್ದು ಕೇವಲ ರೂ.60 ಕೋಟಿ.#IndiraCanteen
1/2 pic.twitter.com/JoA6FEAeTb— Siddaramaiah (@siddaramaiah) September 16, 2022
ಕಳಪೆ ದರ್ಜೆಯ ಊಟ-ತಿಂಡಿ ನೀಡಿ ಜನ ಬರುವುದಿಲ್ಲ ಎಂಬ ನೆಪವೊಡ್ಡಿ ಇಂದಿರಾ_ಕ್ಯಾಂಟೀನ್ ಮುಚ್ಚುವುದು ರಾಜ್ಯ ಬಿಜೆಪಿ ಸರ್ಕಾರದ ಹುನ್ನಾರ.ಕ್ಯಾಂಟೀನ್ ಗಳಿಗೆ ಪ್ರತಿದಿನ ಬರುತ್ತಿದ್ದ 300-400 ಜನರ ಸಂಖ್ಯೆ ಈಗ 50-100ಕ್ಕೆ ಇಳಿದಿದೆಯಂತೆ. ನಗರದ ಬಡವರೆಲ್ಲರೂ ಶ್ರೀಮಂತರಾದರೇ? ಎಂದು ಲೇವಡಿ ಮಾಡಿದ್ದಾರೆ.
ಕಳಪೆ ದರ್ಜೆಯ ಊಟ-ತಿಂಡಿ ನೀಡಿ ಜನ ಬರುವುದಿಲ್ಲ ಎಂಬ ನೆಪವೊಡ್ಡಿ #ಇಂದಿರಾ_ಕ್ಯಾಂಟೀನ್ ಮುಚ್ಚುವುದು @BJP4Karnataka ಸರ್ಕಾರದ ಹುನ್ನಾರ.
ಕ್ಯಾಂಟೀನ್ ಗಳಿಗೆ ಪ್ರತಿದಿನ ಬರುತ್ತಿದ್ದ 300-400 ಜನರ ಸಂಖ್ಯೆ ಈಗ 50-100ಕ್ಕೆ ಇಳಿದಿದೆಯಂತೆ.
ನಗರದ ಬಡವರೆಲ್ಲರೂ ಶ್ರೀಮಂತರಾದರೇ?
2/2@indiracanteen pic.twitter.com/CfxtUmvaFw— Siddaramaiah (@siddaramaiah) September 16, 2022