Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಭಾರತೀಯ ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 1000 ಹೆಚ್ಚು ಅಂಕ ಕುಸಿತ |Share Market

13/05/2025 10:53 AM

BREAKING : `JEE ಅಡ್ವಾನ್ಸ್‌ಡ್ ಪರೀಕ್ಷೆ’ ಪ್ರವೇಶ ಪತ್ರ ಬಿಡುಗಡೆ : ಈ ರೀತಿ ಡೌನ್ಲೋಡ್ ಮಾಡಿಕೊಳ್ಳಿ | JEE Advanced 2025

13/05/2025 10:47 AM

JOB ALERT : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ.!

13/05/2025 10:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ‘ಹಾವು ಕಡಿತ’ಕ್ಕೆ ಚಿಕಿತ್ಸೆ ನೀಡಲು ‘ಮಾರ್ಗಸೂಚಿ’ ಪ್ರಕಟ: ಈ ‘ನಿಯಮ ಪಾಲನೆ’ ಕಡ್ಡಾಯ
KARNATAKA

ರಾಜ್ಯ ಸರ್ಕಾರದಿಂದ ‘ಹಾವು ಕಡಿತ’ಕ್ಕೆ ಚಿಕಿತ್ಸೆ ನೀಡಲು ‘ಮಾರ್ಗಸೂಚಿ’ ಪ್ರಕಟ: ಈ ‘ನಿಯಮ ಪಾಲನೆ’ ಕಡ್ಡಾಯ

By kannadanewsnow0903/03/2024 5:13 AM

ಬೆಂಗಳೂರು: ರಾಜ್ಯ ಸರ್ಕಾರದಿಂದ ಹಾವು ಕಡಿತ ಚಿಕಿತ್ಸಾ ಕೇಂದ್ರಗಳನ್ನು ಗುರುತಿಸುವ ಬಗ್ಗೆ ಹಾಗೂ ಹಾವು ಕಡಿತದ ಪ್ರಕರಣಗಳಿಗೆ ವಿವಿಧ ಹಂತಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಪ್ರಕಟಿತ ಮಾರ್ಗಸೂಚಿ ಕ್ರಮಗಳನ್ನು ಹಾವು ಕಡಿತಕ್ಕೆ ಚಿಕಿತ್ಸೆಯನ್ನು ನೀಡುವ ವೇಳೆಯಲ್ಲಿ ಕಡ್ಡಾಯವಾಗಿ ಪಾಲಿಸುವಂತೆಯೂ ಖಡಕ್ ಸೂಚನೆ ನೀಡಿದೆ.

ರಾಜ್ಯ ಸರ್ಕಾರದಿಂದ ಕೆಲ ದಿನಗಳ ಹಿಂದಷ್ಟೇ ಹಾವು ಕಡಿತವನ್ನು ಅಧಿಸೂಚಿತ ಖಾಯಿಲೆ, ಘೋಷಿತ ಖಾಯಿಲೆ ಎಂಬುದಾಗಿ ಘೋಷಣೆ ಮಾಡಲಾಗಿತ್ತು. ಈ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಹಾವುಗಳ ಕಡಿತಕ್ಕೆ ಚಿಕಿತ್ಸೆ ನೀಡುವ ಸಂಬಂಧ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಪ್ರಕಟಿತ ಮಾರ್ಗಸೂಚಿಯಲ್ಲಿ ಕರ್ನಾಟಕ ಸರ್ಕಾರವು ಹಾವು ಕಡಿತ ಪ್ರಕರಣ ಮತ್ತು ಮರಣವನ್ನು ಅಧಿಸೂಚಿತ ರೋಗವೆಂದು ಅಧಿಸೂಚನೆ ಸಂಖ್ಯೆ ಆಕುಕ 56 ಸಿಜಿಎಂ 2024 ದಿನಾಂಕ 12.02.2024 ರಂದು ಘೋಷಿಸಿದೆ. ರಾಜ್ಯದ ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಎಲ್ಲಾ ಜಿಲ್ಲಾ ಆಸ್ಪತ್ರೆಗಳನ್ನು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಹಾಗೂ ಹಾವು ಕಡಿತದ ಪ್ರಕರಣಗಳಲ್ಲಿ ರೋಗಿಗಳಿಗೆ ವಿವಿಧ ಹಂತಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲು ಈ ಕೆಳಕಂಡಂತೆ ಮಾರ್ಗ ಸೂಚಿಯನ್ನು ನೀಡಲಾಗಿದೆ.

1. ಆಶಾ ಕಾರ್ಯಕರ್ತೆಯರು – ಹಾವು ಕಡಿತದ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ರೋಗಿ ಹಾಗೂ ಸಂಬಂಧಿಕರೊಂದಿಗೆ ಸಮಲೋಚನೆ ನಡೆಸಿ, ರೋಗಿಗಳು ತುರ್ತಾಗಿ ಹತ್ತಿರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ/ತಾಲ್ಲೂಕ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತಲುಪುವಂತೆ ಮನವೊಲಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು.
2. ಉಪ ಕೇಂದ್ರ – ಹಾವು ಕಡಿತದ ಪ್ರಕರಣಗಳು ಕಂಡು ಬಂದಲ್ಲಿ, ತಕ್ಷಣ ರೋಗಿ ಹಾಗೂ ಸಂಬಂಧಿಕರೊಂದಿಗೆ ಸಮಲೋಚನೆ ನಡೆಸಿ, ಮಾರ್ಗಸೂಚಿಯಂತೆ ಸೂಕ್ತ ಪ್ರಥಮ ಚಿಕಿತ್ಸೆ ನೀಡಿ, ರೋಗಿಗಳು ತುರ್ತಾಗಿ ಹತ್ತಿರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ/ತಾಲ್ಲೂಕು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತಲುಪುವಂತೆ ಮನವೊಲಿಸಿ ಆಸ್ಪತ್ರೆಗೆ ಶಿಫಾರಸ್ಸು ಮಾಡುವುದು.

3. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರ-ಹಾವು ಕಡಿತ ಪ್ರಕರಣಗಳುನ ಕಂಡು ಬಂದಲ್ಲಿ ತಕ್ಷಣವೇ ರೋಗಿಯ ಲಕ್ಷಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಪ್ರಥಮ ಚಿಕಿತ್ಸೆ ನೀಡಿ, ರೋಗಿಯೊಂದಿಗೆ ಸಮಾಲೋಚನೆ ನಡೆಸುವುದು. ಹಾವಿನ ನಂಜಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಖಣವೇ ರೋಗಿಯ/ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು ಕಡ್ಡಾಯವಾಗಿ Initial loading dose of 10 vials of Anti snake venom ಅನ್ನು ಉಚಿತವಾಗಿ ಆರೋಗ್ಯ ಕೇಂದ್ರದಲ್ಲಿಯೇ ಪೂರ್ಣಗೊಳಿಸಿ, ಮುಂದಿನ ಉನ್ನತ ಚಿಕಿತ್ಸೆಗಾಗಿ ತಾಲ್ಲೂಕು/ಜಿಲ್ಲಾ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ, ರೋಗಿಗಳನ್ನು ಉಚಿತ ಆಂಬ್ಯುಲೆನ್ಸ್ ನಲ್ಲಿ ರವಾನಿಸುವುದು. ASV ಔಷಧಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ (Adverse reaction) ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ನೀಡುವುದು.
ಹಾವು ಕಡಿತದ ಪ್ರಕರಣ ಹಾಗೂ ಮರಣಗಳನ್ನು IHIP Portal ನಲ್ಲಿ ವರದಿ ಮಾಡುವುದು.
ತಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಂಭವಿಸುವ ಹಾವು ಕಡಿತ ಪ್ರಕರಣಗಳು ವರದಿಯಾಗುವ ಪ್ರಮಾಣಕ್ಕೆ ಅನುಗುಣವಾಗಿ ಸಾಕಷ್ಟು ASV ಔಷಧಿಯ ದಾಸ್ತಾನುವನ್ನು ಇಟ್ಟುಕೊಳ್ಳುವುದು.
ತಮ್ಮ ಆರೋಗ್ಯ ಕೇಂದ್ರದ ಸಮೀಪದಲ್ಲಿರುವ ಹಾವು ಕಡಿತ ಚಿಕಿತ್ಸಾ ಕೇಂದ್ರಗಳ (Snake bite treating centres) ದೂರವಾಣಿ ಸಂಖ್ಯೆಯ ಸಹಿತ ಪಟ್ಟಿಯನ್ನು ತಯಾರಿಸಿ ಸೂಚನಾ ಫಲಕದಲ್ಲಿ ನಮೂದಿಸುವುದು.
ಹಾವು ಕಡಿತ ನಿಯಂತ್ರಣ ಹಾಗೂ ಹಾವು ಕಡಿತ ಚಿಕಿತ್ಸೆಯ ಬಗ್ಗೆ ಐಇಸಿ ಫಲಕ (ಪೋಸ್ಟರ್) ಗಳನ್ನು ತಮ್ಮ ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಹಾಗೂ ಇತರೆ ಸೂಕ್ತ ಸ್ಥಳಗಳಲ್ಲಿ ಎಲ್ಲರಿಗೂ ಕಾಣಿಸುವ ರೀತಿಯಲ್ಲಿ ಹಾಕುವುದು.

4. ಸಾರ್ವಜನಿಕ ತಾಲ್ಲೂಕು ಆಸ್ಪತ್ರೆ ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರ (Snake bite treating centres) -ಹಾವು ಕಡಿತ ಪ್ರಕರಣಗಳು ಕಂಡು ಬಂದಲ್ಲಿ ರೋಗಿಯ ಲಕ್ಷಣಗಳನ್ನು ಕುಲಂಕುಷವಾಗಿ ಪರಿಶೀಲಿಸಿ ಪ್ರಥಮ ಚಿಕಿತ್ಸೆ ನೀಡಿ ಹಾವಿನ ನಂಜಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ರೋಗಿಯ/ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು, ಕಡ್ಡಾಯವಾಗಿ Initial loading dose of 10 vials of Anti snake venom ಅನ್ನು ಉಚಿತವಾಗಿ ಆರೋಗ್ಯ ಕೇಂದ್ರದಲ್ಲಿಯೇ ಪೂರ್ಣಗೊಳಿಸುವುದು, ರೋಗಿಯ ಹಾವು ಕಡಿತದ ಲಕ್ಷಣಕ್ಕೆ ಅನುಗುಣವಾಗಿ ಅವಶ್ಯಕತೆಯಿದ್ದರೆ ಮುಂದಿನ ASV Dose ಗಳನ್ನು ನೀಡುವುದು. ASV ಔಷಧಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ (Adverse reaction) ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ನೀಡುವುದು. ಹಾವು ಕಡಿತದ ಎಲ್ಲಾ ಪ್ರಕರಣಗಳನ್ನು ರೋಗ ಲಕ್ಷಣ ಇಲ್ಲದಿದ್ದರೂ ಕೂಡ ಹಾಗೂ ಶಂಕಿತ ಹಾವು ಕಡಿತ ಪ್ರಕರಣಗಳನ್ನು 24 ಗಂಟೆಗಳ ಕಾಲ ಒಳರೋಗಿಯಾಗಿ ಭರ್ತಿ ಮಾಡಿ, ರೋಗಿಯ ಲಕ್ಷಣಗಳ ಉಸ್ತುವಾರಿ ಮಾಡುವುದು. ಒಂದು ವೇಳೆ ರೋಗಿಗಳಲ್ಲಿ ಉಸಿರಾಟದ ತೊಂದರೆ ಕಂಡುಬಂದಲ್ಲಿ ಅಥವಾ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದಲ್ಲಿ ಮುಂದಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ/ವೈದ್ಯಕೀಯ ಕಾಲೇಜಿನ ವೈದ್ಯರನ್ನು ಸಂಪರ್ಕಿಸಿ, ರೋಗಿಗಳನ್ನು ಉಚಿತ ಆಂಬ್ಯುಲೆನ್ಸ್ ನಲ್ಲಿ ರವಾನಿಸುವುದು.
ಹಾವು ಕಡಿತದ ಪ್ರಕರಣ ಹಾಗೂ ಮರಣಗಳನ್ನು IHIP Portal ನಲ್ಲಿ ವರದಿ ಮಾಡುವುದು.
ತಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಂಭವಿಸುವ ಹಾವು ಕಡಿತ ಪ್ರಕರಣಗಳು ವರದಿಯಾಗುವ ಪ್ರಮಾಣಕ್ಕೆ ಅನುಗುಣವಾಗಿ ಸಾಕಷ್ಟು ASV ಔಷಧಿಯ ದಾಸ್ತಾನುವನ್ನು ಇಟ್ಟುಕೊಳ್ಳುವುದು.
ಹಾವು ಕಡಿತ ನಿಯಂತ್ರಣ ಹಾಗೂ ಹಾವು ಕಡಿತ ಚಿಕಿತ್ಸೆಯ ಬಗ್ಗೆ ಐಇಸಿ ಫಲಕ (ಪೋಸ್ಟರ್‌)ಗಳನ್ನು ತಮ್ಮ ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಹಾಗೂ ಇತರ ಸೂಕ್ತ ಸ್ಥಳಗಳಲ್ಲಿ ಎಲ್ಲರಿಗೂ ಕಾಣಿಸುವ ರೀತಿಯಲ್ಲಿ ಹಾಕುವುದು.

5. ಜಿಲ್ಲಾ ಆಸ್ಪತ್ರೆ – ಹಾವು ಕಡಿತ ಪ್ರಕರಣಗಳು ಕಂಡು ಬಂದಲ್ಲಿ ರೋಗಿಯ ಲಕ್ಷಣಗಳನ್ನು ಕುಲಂಕುಷವಾಗಿ ಪರಿಶೀಲಿಸಿ ಪ್ರಥಮ ಚಿಕಿತ್ಸೆ ನೀಡಿ ಹಾವಿನ ನಂಜಿನ ಲಕ್ಷಣಗಳು ಕಂಡು ಬಂದಲ್ಲಿ, ತಕ್ಷಣವೇ ರೋಗಿಯ/ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು, ಕಡ್ಡಾಯವಾಗಿ Initial loading dose of 10 vials of Anti snake venom ಅನ್ನು ಉಚಿತವಾಗಿ ನೀಡುವುದು. ರೋಗಿಯ ಹಾವು ಕಡಿತದ ಲಕ್ಷಣಕ್ಕೆ ಅನುಗುಣವಾಗಿ ಅವಶ್ಯಕತೆಯಿದ್ದರೆ ಮುಂದಿನ ASV Dose ಗಳನ್ನು ನೀಡುವುದು. ASV ಔಷಧಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ (Adverse reaction) ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ನೀಡುವುದು. ಹಾವು ಕಡಿತದ ಎಲ್ಲಾ ಪ್ರಕರಣಗಳನ್ನು ರೋಗ ಲಕ್ಷಣ ಇಲ್ಲದಿದ್ದರೂ ಕೂಡ ಹಾಗೂ ಶಂಕಿತ ಹಾವು ಕಡಿತ ಪ್ರಕರಣಗಳನ್ನು 24 ಗಂಟೆಗಳ ಕಾಲ ಒಳರೋಗಿಯಾಗಿ ಭರ್ತಿ ಮಾಡಿ, ರೋಗಿಯ ಲಕ್ಷಣಗಳ ಉಸ್ತುವಾರಿ ಮಾಡುವುದು. ಒಂದು ವೇಳೆ ರೋಗಿಗಳಲ್ಲಿ ಉಸಿರಾಟದ ತೊಂದರೆ ಕಂಡುಬಂದಲ್ಲಿ ಅಥವಾ ತೀವ್ರ ತರಹದ ಚಿಕಿತ್ಸೆ ಅವಶ್ಯಕತೆಯಿದ್ದಲ್ಲಿ ರೋಗಿಗಳನ್ನು ICU ನಲ್ಲಿ ಭರ್ತಿ ಮಾಡಿ ಚಿಕಿತ್ಸೆ ನೀಡುವುದು.
ಹಾವು ಕಡಿತದ ಪ್ರಕರಣ ಹಾಗೂ ಮರಣಗಳನ್ನು ಪ್ರಕರಣಗಳನ್ನು IHIP Portal ನಲ್ಲಿ ವರದಿ ಮಾಡುವುದು.
ತಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಂಭವಿಸುವ ಹಾವು ಕಡಿತ ಪ್ರಕರಣಗಳು ವರದಿಯಾಗುವ ಪ್ರಮಾಣಕ್ಕೆ ಅನುಗುಣವಾಗಿ ಸಾಕಷ್ಟು ASV ಔಷಧಿಯ ದಾಸ್ತಾನುವನ್ನು ಇಟ್ಟುಕೊಳ್ಳುವುದು.
ಹಾವು ಕಡಿತ ನಿಯಂತ್ರಣ ಹಾಗೂ ಹಾವು ಕಡಿತ ಚಿಕಿತ್ಸೆಯ ಬಗ್ಗೆ ಐಇಸಿ ಫಲಕ (ಪೋಸ್ಟರ್‌)ಗಳನ್ನು ತಮ್ಮ ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಹಾಗೂ ಇತರೆ ಸೂಕ್ತ ಸ್ಥಳಗಳಲ್ಲಿ ಎಲ್ಲರಿಗೂ ಕಾಣಿಸುವ ರೀತಿಯಲ್ಲಿ ಹಾಕುವುದು.

6. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು – ಜಿಲ್ಲೆಯ ಎಲ್ಲಾ ವೈಧ್ಯಾಧಿಕಾರಿಗಳು, ತಜ್ಞರು ಹಾಗೂ ಎಲ್ಲಾ ಆರೋಗ್ಯ ಕಾರ್ಯಕರ್ತರುಗಳಿಗೆ ಹಾವು ಕಡಿತ ತಡೆಗಟ್ಟುವ ಹಾಗೂ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡಿ ಬೇರೆ ಇಲಾಖೆಗಳ ಸಹಯೋಗದೊಂದಿಗೆ ಹಾವು ಕಡಿತ ನಿಯಂತ್ರಣದ ಬಗ್ಗೆ IEC ಕಾರ್ಯಕ್ರಮಗಳನ್ನು ನಡೆಸುವುದು. ತಮ್ಮ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ (ವೈದ್ಯಕೀಯ ಕಾಲೇಜುಗಳನ್ನು ಒಳಗೊಂಡಂತೆ) ಹಾವು ಕಡಿತದ ಹಾಗೂ ಮರಣದ ಎಲ್ಲಾ ಪ್ರಕರಣಗಳು IHIP Portal ನಲ್ಲಿ ವರದಿಯಾಗಿರುವ ಬಗ್ಗೆ ಮರು ಪರಿಶೀಲಿಸುವುದು. ಒಂದು ವೇಳೆ ಹಾವು ಕಡಿತದಿಂದ ರೋಗಿಯು ಮರಣ ಹೊಂದಿದಲ್ಲಿ District Audit committee ರಚಿಸಿ Death Audit ಮಾಡಿ ವಿವರವಾದ ವರದಿಯನ್ನು ಆದಷ್ಟು ಬೇಗ ರಾಜ್ಯಕ್ಕೆ ಸಲ್ಲಿಸುವುದು. ಒಂದು ವೇಳೆ ರೋಗಿಯು ಸಂರ್ಪಕಿಸುವ ಆರೋಗ್ಯ ಕೇಂದ್ರವು ಹಳ್ಳಿಗಳಿಂದ ಪ್ರಯಾಣದ ಸಮಯ 30 ನಿಮಿಷಕ್ಕಿಂತ ಹೆಚ್ಚು ಇದ್ದಲ್ಲಿ, ರೋಗಿಯು ತಮ್ಮ ಹಳ್ಳಿಯಿಂದ 30 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ತಲುಪಬಹುದಾದಂತಹ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳಾಗಿ ಗುರುತಿಸಿ, ಆ ಕೇಂದ್ರವು ಹಾವು ಕಡಿತ ಚಿಕಿತ್ಸಾ ಕೇಂದ್ರಗಳಾಗಿ ಕರ್ತವ್ಯ ನಿರ್ವಹಿಸಲು ಸೂಕ್ತ ಕ್ರಮಗಳನ್ನು ಕೈಗೊಂಡು ರಾಜ್ಯಕ್ಕೆ ವರದಿ ಸಲ್ಲಿಸುವುದು.

7. ಜಿಲ್ಲಾ/ತಾಲ್ಲೂಕು ಆಸ್ಪತ್ರೆಯ ಫಿಷಿಯನ್ ಗಳು – ದಿನಾಂಕ 08.02.2024 ರಂದು ನಡೆದ ಹಾವು ಕಡಿತ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ತರಬೇತಿಗೆ ಹಾಜರಾದ ಫಿಜಿಷಿಯನ್‌ಗಳನ್ನು ಆಯಾ ಜಿಲ್ಲೆಯ ಹಾವು ಕಡಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳಾಗಿ ಗುರುತಿಸಲಾಗಿದ್ದು, ಈ ಫಿಜಿಷಿಯನ್ ಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಸರ್ವೇಕ್ಷಾಣಾಧಿಕಾರಿಗಳ ಸಂಯೋಜನೆಯೊಂದಿಗೆ ಕಾಲಕಾಲಕ್ಕೆ ಇತರ ತಜ್ಞರು, ವೈದ್ಯಾಧಿಕಾರಿಗಳು ಹಾಗೂ ಇತರೆ ಆರೋಗ್ಯ ಕಾರ್ಯಕರ್ತರುಗಳಿಗೆ ಹಾವು ಕಡಿತ ತಡೆಗಟ್ಟುವ ಹಾಗೂ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡುವುದು. ತಮ್ಮ ಆಸ್ಪತ್ರೆಯ ಹಾಗೂ ತಮ್ಮ ಜಿಲ್ಲೆಯಲ್ಲಿರುವ ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಹಾವು ಕಡಿತ ಪ್ರಕರಣ ಹಾಗೂ ಮರಣಗಳನ್ನು IHIP Portal ನಲ್ಲಿ ವರದಿಯಾಗಿರುವ ಬಗ್ಗೆ ಪರಿಶೀಲಿಸುವುದು. ಈ ಪತ್ರದೊಂದಿಗೆ ಜಿಲ್ಲಾ ನೋಡಲ್ ಫಿಸಿಷಿಯನ್‌ಗಳ ಪಟ್ಟಿಯನ್ನು ಲಗತ್ತಿಸಲಾಗಿದೆ.
ಈ ಸುತ್ತೋಲೆಯೊಂದಿಗೆ ಹಾವು ಕಡಿತ ಚಿಕಿತ್ಸಾ ಕೇಂದ್ರಗಳಲ್ಲಿ ಇರಬೇಕಾಗಿರುವ ಮಾನವ ಸಂಪನ್ಮೂಲ, ಔಷಧಿಗಳು ಹಾಗೂ ಉಪಕರಣಗಳ ಪರಿಶೀಲನಾ ಪಟ್ಟಿಯನ್ನು ಲಗತ್ತಿಸಿದೆ. ಅದರಂತೆ ಎಲ್ಲಾ ಸದರಿ ದಾಸ್ತಾನುಗಳನ್ನು ಇಟ್ಟುಕೊಳ್ಳುವುದು.

ವಿಶೇಷ ಸೂಚನೆ

1. ಮಕ್ಕಳಲ್ಲಿ ಹಾಗೂ ಗರ್ಭೀಣಿ ಸ್ತ್ರೀಯರಲ್ಲಿ ಹಾವು ಕಡಿತ ಪ್ರಕರಣಗಳು ಕಂಡು ಬಂದಲ್ಲಿ, ಅವರಿಗೂ ಕೂಡ ಮೇಲೆ ನಮೂದಿಸಿದ ಮಾದರಿಯಲ್ಲೇ Initial loading dose ಆದ 10 Vials of ASV ಯನ್ನು ಕಡ್ಡಾಯವಾಗಿ ನೀಡುವಂತೆ ಹೇಳಿದೆ.
2. ವೈದ್ಯಕೀಯ ಹಾಗೂ ಮಕ್ಕಳ ವಿಭಾಗದ ತಜ್ಞರಿಗಾಗಿ ರಚಿಸಿರುವ ‘SBPC Karnataka’ WhatsApp ಗುಂಪಿನಲ್ಲಿ ರಾಜ್ಯದ ಎಲ್ಲಾ ಹಾವು ಕಡಿತ ಪ್ರಕರಣಗಳನ್ನು ವರದಿ ಮಾಡುವುದು ಹಾಗೂ ಚರ್ಚಿಸುವಂತೆ ತಿಳಿಸಿದೆ.

Share. Facebook Twitter LinkedIn WhatsApp Email

Related Posts

JOB ALERT : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ.!

13/05/2025 10:24 AM3 Mins Read

BIG NEWS : ಒಂದು ಮೊಬೈಲ್ ಸಂಖ್ಯೆಗೆ ಎಷ್ಟು `ಆಧಾರ್ ಕಾರ್ಡ್‌’ಗಳನ್ನು ಲಿಂಕ್ ಮಾಡಬಹುದು? ಇಲ್ಲಿದೆ ಮಾಹಿತಿ

13/05/2025 9:52 AM2 Mins Read

JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಚಿತ್ರದುರ್ಗದಲ್ಲಿ ಮೇ.16 ರಂದು ನೇರ ನೇಮಕಾತಿ ಸಂದರ್ಶನ

13/05/2025 9:18 AM1 Min Read
Recent News

BREAKING : ಭಾರತೀಯ ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 1000 ಹೆಚ್ಚು ಅಂಕ ಕುಸಿತ |Share Market

13/05/2025 10:53 AM

BREAKING : `JEE ಅಡ್ವಾನ್ಸ್‌ಡ್ ಪರೀಕ್ಷೆ’ ಪ್ರವೇಶ ಪತ್ರ ಬಿಡುಗಡೆ : ಈ ರೀತಿ ಡೌನ್ಲೋಡ್ ಮಾಡಿಕೊಳ್ಳಿ | JEE Advanced 2025

13/05/2025 10:47 AM

JOB ALERT : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ.!

13/05/2025 10:24 AM

BIG NEWS : ಒಂದು ಮೊಬೈಲ್ ಸಂಖ್ಯೆಗೆ ಎಷ್ಟು `ಆಧಾರ್ ಕಾರ್ಡ್‌’ಗಳನ್ನು ಲಿಂಕ್ ಮಾಡಬಹುದು? ಇಲ್ಲಿದೆ ಮಾಹಿತಿ

13/05/2025 9:52 AM
State News
KARNATAKA

JOB ALERT : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ.!

By kannadanewsnow5713/05/2025 10:24 AM KARNATAKA 3 Mins Read

ಮಡಿಕೇರಿ : ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವತಿಯಿಂದ ಮಡಿಕೇರಿ ತಾಲ್ಲೂಕು ವ್ಯಾಪ್ತಿಗೆ ಒಳಪಟ್ಟ 13 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ…

BIG NEWS : ಒಂದು ಮೊಬೈಲ್ ಸಂಖ್ಯೆಗೆ ಎಷ್ಟು `ಆಧಾರ್ ಕಾರ್ಡ್‌’ಗಳನ್ನು ಲಿಂಕ್ ಮಾಡಬಹುದು? ಇಲ್ಲಿದೆ ಮಾಹಿತಿ

13/05/2025 9:52 AM

JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಚಿತ್ರದುರ್ಗದಲ್ಲಿ ಮೇ.16 ರಂದು ನೇರ ನೇಮಕಾತಿ ಸಂದರ್ಶನ

13/05/2025 9:18 AM

BIG NEWS : ರಾಜ್ಯದಲ್ಲಿ ‘ಬೋರ್ ವೆಲ್’ ಕೊರೆಸುವ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಈ ರೂಲ್ಸ್ ಪಾಲನೆ ಕಡ್ಡಾಯ.!

13/05/2025 9:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.