ಬೆಂಗಳೂರು: ಮೀಸಲಾತಿ ಹೆಚ್ಚಳಕ್ಕಾಗಿ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದಿಂದ ಸರ್ಕಾರಕ್ಕೆ ಮನವಿ, ಪ್ರತಿಭಟನೆಯ ಬಿಸಿ ಮುಟ್ಟಿಸಲಾಗಿತ್ತು. ಇದಲ್ಲದೇ ಪಂಚಮಸಾಲಿ ಮೀಸಲಾತಿಗೆ ಹೆಡ್ ಲೈನ್ ಕೂಡ ಕೊಟ್ಟಿತ್ತು. ಈ ಎಲ್ಲಾ ಕಾರಣದಿಂದಾಗಿ ರಾಜ್ಯ ಸರ್ಕಾರದಿಂದ ಎರಡು ಸಮುದಾಯಕ್ಕೆ ಬಂಫರ್ ಗಿಫ್ಟ್ ನೀಡಲಾಗಿದೆ. ಅದೇ 2ಸಿ, 2ಡಿ ಮೀಸಲಾತಿ ನೀಡುವುದಾಗಿ ಘೋಷಣೆ ಮಾಡಿದೆ.
ನಿನ್ನೆಯ ಗುರುವಾರದಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರವರ್ಗ 2ಎ ಮತ್ತು 2ಡಿ ಹಾಗೂ 2ಡಿಯನ್ನು ಹೊಸದಾಗಿ ರಚಿಸಿ, ರಾಜ್ಯದ ಎರಡು ಪ್ರಬಲ ಸಮುದಾಯಗಳಾದಂತ ಒಕ್ಕಲಿಗ, ಲಿಂಗಾಯತರ ಬೇಡಿಕೆ ಈಡೇರಿಸೋ ನಿರ್ಧಾರವನ್ನು ಪ್ರಕಟಿಸಿದೆ.
ಸರ್ಕಾರದ ನಿರ್ಧಾರದಂತೆ 2ಎ ಮತ್ತು 2ಬಿ ಜೊತೆಗೆ ಹೊಸದಾಗಿ ರಚನೆಯಾಗುವ 2ಸಿ ಮತ್ತು 2ಡಿ ಪ್ರವರ್ಗಕ್ಕೆ 3ಎ ಮತ್ತು 3ಬಿನಲ್ಲಿರುವ ಸಮುದಾಯಗಳನ್ನು ವರ್ಗಾಯಿಸಲಾಗುತ್ತದೆ. ಅಂದರೇ 3ಎನಲ್ಲಿರುವ ಒಕ್ಕಲಿಗರು 2ಸಿಗೂ, 3ಬಿನಲ್ಲಿರುವಂತ ಲಿಂಗಾಯತರನ್ನು 2ಡಿಗೂ ವರ್ಗಾಯಿಸಲು ಸಂಪುಟ ಸಭೆ ತಾತ್ವಿಕ ಒಪ್ಪಿಗೆಯನ್ನು ನೀಡಿದೆ. ಇದಲ್ಲದೇ 2ಎ ಮತ್ತು 2 ಬಿನಲ್ಲಿರುವ ಸಮುದಾಯಗಳಿಗೆ ಯಾವುದೇ ಮೀಸಲಾತಿ ಕಡಿತ ಮಾಡದೇ ಹೊಸ ಲೆಕ್ಕಾಚಾರ ರೂಪಿಸಲಾಗಿದೆ. ಈ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.
ಮಂಡ್ಯದಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಣಕಹಳೆ: ಹಲವು ಕಾರ್ಯಕ್ರಮಗಳಲ್ಲಿ ಭಾಗಿ
ಕೋವಿಡ್ ಬಿಎಫ್.7 ತಡೆಗೆ ರಾಜ್ಯ ಸರ್ಕಾರ ಮಹತ್ವದ ಕ್ರಮ: ಕೊರೋನಾ ಪರೀಕ್ಷೆ ಹೆಚ್ಚಳ | Covid19 Test