ಬೆಂಗಳೂರು: ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಜೈಲುಪಾಲಾಗಿದ್ದಾರೆ. ಅವರ ವಿರುದ್ಧ ಈಗ ಸಂತ್ರಸ್ತೆ ಮತ್ತೊಂದು ಸ್ಪೋಟಕ ಹೇಳಿಕೆ ಹೊರ ಹಾಕಿದ್ದಾರೆ. ಅದೇ ಶಾಕಿಂಗ್ ಎನ್ನುವಂತೆ ಮುನಿರತ್ನ ತಮ್ಮ ಮೇಲೆ ವಿಧಾನಸೌಧ, ವಿಕಾಸಸೌಧದಲ್ಲೂ ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಆ ಸಂಬಂಧ ಕೇಸ್ ದಾಖಲಾಗಿ, ಮುನಿರತ್ನ ಜೈಲುಪಾಲಾಗಿದ್ದಾರೆ. ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವಂತ ಸಂತ್ರಸ್ತೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಪೊಲೀಸರ ಮುಂದೆ ವಿಚಾರಣೆಯ ವೇಳೆಯಲ್ಲಿ ಸಂತ್ರಸ್ತ ಮಹಿಳೆಯು ಬಿಜೆಪಿ ಶಾಸಕ ಮುನಿರತ್ನ ಅವರು ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿಯೂ ನನ್ನ ಮೇಲೆ ರೇಪ್ ಮಾಡಿದ್ದಾರೆ ಎಂಬುದಾಗಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.
2020ರಿಂದ 2023ರವರೆಗೆ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ. ಮುನಿರತ್ನ ಸಚಿವರಾಗಿದ್ದಾಗ ಕಚೇರಿ ಕರೆಸಿಕೊಂಡಿದ್ದರು. ಇದೇ ಕಚೇರಿಯಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂಬುದಾಗಿ ಆರೋಪಿಸಿದ್ದಾರೆ.