ಬೆಂಗಳೂರು:2024-25ನೇ ಸಾಲಿನ ಶುಲ್ಕ ರಚನೆಯನ್ನು ತಮ್ಮ ವೆಬ್ಸೈಟ್ಗಳಲ್ಲಿ ಮತ್ತು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ಸಿಸ್ಟಮ್ (ಎಸ್ಎಟಿಎಸ್) ಪೋರ್ಟಲ್ನಲ್ಲಿ ಪ್ರಕಟಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಿದೆ.
ಶಾಲೆಗಳು ಶುಲ್ಕದ ವಿವರಗಳನ್ನು ಪ್ರಕಟಿಸುವುದು ಕಡ್ಡಾಯ ಎಂದು ಶಾಲಾ ಶಿಕ್ಷಣ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. “ಶಾಲೆಗಳು ಶುಲ್ಕ ರಚನೆಯನ್ನು ಪ್ರಕಟಿಸಲು ನಿರಾಕರಿಸಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅನೇಕ ಶಾಲೆಗಳು ಶುಲ್ಕವನ್ನು ಶೇಕಡಾ 30-40 ರಷ್ಟು ಹೆಚ್ಚಿಸಿವೆ ಎಂದು ಇಲಾಖೆಗೆ ಪೋಷಕರಿಂದ ದೂರುಗಳು ಬಂದಿದ್ದವು.