ಬೆಂಗಳೂರು: ನಗರದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ನಿನ್ನೆಯಷ್ಟೇ ಬಿಬಿಎಂಪಿ ವ್ಯಾಪ್ತಿಯಲ್ಲಿ 265 ಕೇಸ್ ದಾಖಲಾಗಿ, 4305ಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದಿಂದ ನಿಯಂತ್ರಣ ಕ್ರಮಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎಕ್ಸ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆಳಲ್ಲಿ ಡೆಂಗ್ಯೂ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಚಿಕಿತ್ಸೆಯ ಬಗ್ಗೆ ಗಮನ ಹರಿಸೋದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಅಂತ ತಿಳಿಸಿದೆ.
ಬೆಂಗಳೂರಲ್ಲಿ ಡೆಂಗ್ಯೂ ರೋಗಿಗಳ ಚಿಕಿತ್ಸೆಗಾಗಿ ಕೆಸಿ ಜನರಲ್ ಆಸ್ಪತ್ರೆಗೆ ಡಾ.ಸುರೇಶ್-9986121101, ಸಿವಿ ರಾಮನ್ ಜನರಲ್ ಆಸ್ಪತ್ರೆಗೆ ಡಾ.ಕವಿತ ಗೌತಮ್ -9008594651, ಜಯನಗರ ಜನರಲ್ ಆಸ್ಪತ್ರೆಗೆ ಡಾ.ದೇವೇಂದ್ರಪ್ಪ ಕೆ ಆರ್-9880571367, ಯಲಹಂಕ ಜನರಲ್ ಆಸ್ಪತ್ರೆಗೆ ಡಾ.ಗಣೇಶ್ -9980025323, ಕೆ ಆರ್ ಪುರಂ ಜನರಲ್ ಆಸ್ಪತ್ರೆಗೆ ಡಾ.ಅಶೋಕ್ ರೆಡ್ಡಿ -7022329578 ಹಾಗೂ ವಾಣಿವಿಲಾಸ ಆಸ್ಪತ್ರೆಗೆ ಡಾ.ರವಿಶಂಕರ್ -9449487592 ಅವರನ್ನು ನೋಡಲ್ ಆಧಿಕಾರಿಯಾಗಿ ನೇಮಕ ಮಾಡಿದೆ.
Nodal Officers have been appointed for #Dengue Treatment in all govt hospitals across #Bengaluru. These dedicated officers will ensure better patient care, quicker response times, & effective management of dengue cases.
Toll-free Helpline No: 1800-425-8330
Let's #DefeatDengue! pic.twitter.com/9H7Hi0StiM
— K'taka Health Dept (@DHFWKA) July 19, 2024
ರಾಜ್ಯದಲ್ಲಿ 6 ತಿಂಗಳಲ್ಲಿ 1,791 ಡ್ರಗ್ಸ್ ಪ್ರಕರಣಗಳು ದಾಖಲು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ
BREAKING : ಮೈಸೂರಲ್ಲಿ ಭೀಕರ ಅಪಘಾತ : ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ದಂಪತಿಗಳ ದುರ್ಮರಣ!