ಚಿಕ್ಕಮಗಳೂರು: ಹಿರೇಮಗಳೂರಿನ ಕೋದಂಡ ರಾಮಚಂದ್ರ ದೇವಸ್ಥಾನದ ಅರ್ಚಕ ಹಿರೇಮಗಳೂರು ಕಣ್ಣನ್ ಅವರಿಗೆ ಹೆಚ್ಚುವರಿ ₹4.74 ಲಕ್ಷ ಹಿಂದಿರುಗಿಸುವಂತೆ ನೀಡಿದ್ದ ನೋಟಿಸ್ ಅನ್ನು ಮುಜರಾಯಿ ಇಲಾಖೆ ವಾಪಾಸ್ ಪಡೆದಿದೆ.
ಏನೀದು ಘಟನೆ: ಹೀರೇಮಗಳೂರು ಕಣ್ಣನ್ ಹಿರಿಯ ಸಾಹಿತಿ, ವಾಗ್ಮಿ ಮತ್ತು ಕನ್ನಡಲ್ಲಿಯೇ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಹಿರೇಮಗಳೂರು ಕಣ್ಣನ್ ಅವರಿಗೆ ನೀಡುತ್ತಿದ್ದ ವೇತನವನ್ನು ಈಗ ರಾಜ್ಯ ಸರ್ಕಾರ ಕೇಳಿತ್ತು, ಕಳೆದ 50 ವರ್ಷಗಳಿಂದ ಚಿಕ್ಕಮಗಳೂರು ಹೊರ ವಲಯದಲ್ಲಿರುವ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಹಿರೇಮಗಳೂರು ಕಣ್ಣನ್ ಅವರಿಗೆ ತಮ್ಮ 10 ವರ್ಷದ ಸಂಬಳ ವಾಪಸ್ಸು ಕೊಡುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ನೋಟಿಸ್ ನೀಡಿತ್ತು.
ಹಾಗೇ ರಾಜ್ಯ ಸರ್ಕಾರ ಪ್ರತಿ ತಿಂಗಳು 7,500 ರೂಪಾಯಿ ವೇತನ ಇವರಿಗೆ ದೇವಾಲಯದ ಅರ್ಚಕ ಸಲುವಾಗಿ ನೀಡುತ್ತಿತ್ತು. ಆದರೆ ಇದೀಗ ಅವರು ಕಾರ್ಯನಿರ್ವಹಣೆ ಮಾಡುತ್ತಿರುವ ದೇವಾಲಯದ ಆದಾಯ ಕಡಿಮೆ ಇದೆ ಎಂದು ಕಾರಣ ನೀಡಿ ಈ ಹಿಂದೆ ನೀಡಿದ್ದ 7,500 ರೂಪಾಯಿ ವೇತನದಲ್ಲಿ 4,500 ರೂಪಾಯಿ ವಾಪಸ್ ನೀಡುವಂತೆ ಈ ತಿಂಗಳ ವೇತನವನ್ನು ತಡೆ ಹಿಡಿದು 2023ರ ಡಿಸೆಂಬರ್ 2ರಂದು ತಹಶಿಲ್ದಾರ್ ಸುಮಂತ್ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಹಿರೇಮಗಳೂರ್ ಕಣ್ಣನ್, ಕೋದಂಡರಾಮ ದೇವಸ್ಥಾನದ ಅರ್ಚಕರು. ಹಿರೆಮಗಳೂರಿನಲ್ಲಿರುವ ಕೋದಂಡ ಕಲ್ಯಾಣರಾಮನ ದೇವಾಲಯದಲ್ಲಿ ವರ್ಷದ ಎಲ್ಲಾ ದಿನಗಳಲ್ಲೂ ಕನ್ನಡದಲ್ಲಿ ದೇವತಾರ್ಚನೆ, ಪೂಜೆ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಇಲ್ಲಿ ಕೋದಂಡರಾಮದೇವರಿಗೆ ಅಭಿಷೇಕ, ಅಲಂಕಾರ, ಮಂಗಳಾರತಿ, ಎಲ್ಲಕ್ಕೂಎಲ್ಲ ಸೇವೆಗಳೂ ಕನ್ನಡದಲ್ಲೇ ನಡೆಯುತ್ತವೆ; ಕನ್ನಡದ ಮಂತ್ರಗಳಲ್ಲಿಯೇ ನಡೆಯುತ್ತವೆ.