ಬೆಂಗಳೂರು: ಈಗಾಗಲೇ ವಿಧಾನಸಭೆಯಲ್ಲಿ ಮಂಡನೆಯಾಗಿದ್ದಂತ ಮತಾಂತರ ನಿಷೇಧ ಕಾಯ್ದೆಯನ್ನು, ವಿಧಾನ ಪರಿಷತ್ತಿನಲ್ಲಿಯೂ ಇದೀಗ ಮಂಡಿಸೋದಕ್ಕೆ ರಾಜ್ಯ ಬಿಜೆಪಿ ಸರ್ಕಾರ ತಯಾರಿ ನಡೆಸಿದೆ.
ಈ ಸಂಬಂಧ ಪರಿಷತ್ ಸಭಾಪತಿಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಬಿಜೆಪಿ ಸದಸ್ಯರ ಮಹತ್ವದ ಸಭೆ ಕೂಡ ನಡೆಸಲಾಗುತ್ತಿದೆ. ವಿಧಾನ ಪರಿಷತ್ ಮಧ್ಯಾಹ್ನ 3.30ಕ್ಕೆ ಮುಂದೂಡಿಕೆಯಾಗುತ್ತಿದ್ದಂತೆ, ಸಭಾಪತಿ ನೇತೃತ್ವದಲ್ಲಿ ಸಭೆ ಕೂಡ ಆರಂಭಗೊಂಡಿದೆ.
ಬಿಜೆಪಿ ಸದಸ್ಯರ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳನ್ನು ಚರ್ಚೆ ನಡೆಸಲಾಗುತ್ತಿದ್ದು, ಇಂದು ಸಮಯ ನೋಡಿಕೊಂಡು ಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸೋ ಸಾಧ್ಯತೆ ಇದೆ.
ಮತ್ತೊಂದೆಡೆ ರಾಜ್ಯ ಸರ್ಕಾರ ವಿಧಾನಪರಿಷತ್ತಿನಲ್ಲಿ ಮಂಡಿಸೋದಕ್ಕೆ ಹೊರಟಿರುವಂತ ಮತಾಂತರ ನಿಷೇಧ ಕಾಯ್ದೆಗೆ ವಿಪಕ್ಷ ಕಾಂಗ್ರೆಸ್ ನಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗದ್ಧಲ ಕೋಲಾಹಲದ ನಡುವೆ ಇದೀಗ ವಿಧಾನಪರಿಷತ್ ಕಲಾಪವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಿಕೆ ಮಾಡಲಾಗಿದೆ.