ಬೆಂಗಳೂರು: ರಾಜ್ಯ ಸರ್ಕಾರ ಪಡಿತರ ಸಾಗಿಸಿದ್ದಕ್ಕಾಗಿ ಪಾವತಿ ಮಾಡಬೇಕಿದ್ದ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಹಿನ್ನಲೆಯಲ್ಲಿ ಲಾರಿ ಮಾಲೀಕರು ಮುಷ್ಕರವನ್ನು ವಾಪಾಸ್ ಪಡೆದಿರುವುದಾಗಿ ಸಂಘವು ಘೋಷಿಸಿದೆ.
ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ-2025ರ ಮಾಹೆಗಳಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿಗಾಗಿ ಮತ್ತು ಇತರ ಪ್ರಾಸಂಗಿಕ ಶುಲ್ಕಗಳಾದ ಸಗಟು ಮತ್ತು ಚಿಲ್ಲರೆ ಲಾಭಾಂಶ, ಸಾಗಾಣಿಕೆ ಶುಲ್ಕಗಳಿಗೆ ಉಂಟಾಗುವ ವೆಚ್ಚವನ್ನು ಭರಿಸಲು ರೂ.2082.99 ಕೋಟಿಗಳಅ ನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದಿದೆ.
ಮೇಲ್ಕಂಡಂತೆ ಬಿಡುಗಡೆಗೊಳಿಸಿದ ಅನುದಾನದಲ್ಲಿ ರೂ.21.79 ಕೋಟಿಗಳು ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮ ನಿಗಮಿತ, ಬೆಂಗಳೂರು ಇವರಲ್ಲಿ ಉಳಿಕೆಯಾಗಿರುತ್ತದೆ. ಹಾಗಾಗಿ ಫೆಬ್ರವರಿ-2025 ರಿಂದ ಮೇ- 20250 ಮಾಹವರೆಗೂ ಸಗಟು/ಚಿಲ್ಲರೆ ಲಾಭಾಂಶ ಸಾಗಾಣಿಕೆ ವೆಚ್ಚಕ್ಕಾಗಿ ಬಿಡುಗಡೆಗೊಳಿಸಲು ಕೊರತೆಯಾಗುತ್ತದೆ ಎಂದು ತಿಳಿಸಿರುತ್ತಾರೆ.
ಮುಂದುವರೆದು, ಫೆಬ್ರವರಿ-2025 ರಿಂದ ಮೇ-2025ರ ಮಾಹೆವರೆಗೂ ಸಗಟು/ಚಿಲ್ಲರೆ ಲಾಭಾಂಶ, ಸಾಗಾಣಿಕೆ ವೆಚ್ಚಕ್ಕಾಗಿ ಅನುದಾನವು ಕೊರತೆಯಾಗಿದ್ದು, ಈ ಕೆಳಕಂಡ ಪಟ್ಟಿಯಲ್ಲಿ ವಿವರಿಸಿರುವಂತೆ ಸಗಟು/ಚಿಲ್ಲರೆ ಲಾಭಾಂಶ, ಸಾಗಾಣಿಕೆ ವೆಚ್ಚಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೋರಿರುತ್ತಾರೆ ಎಂದು ತಿಳಿಸಿದೆ.
ಮೇಲ್ಕಂಡ ಪುಸ್ತಾವನೆಯನ್ನು ಪರಿಶೀಲಿಸಲಾಗಿ ಫೆಬ್ರವರಿ-2025ರಿಂದ ಮೇ-2025ರ ಮಾಹೆಯವರೆಗೂ ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿಯನ್ನು ಹೊರತುಪಡಿಸಿ ಪ್ರಾಸಂಗಿಕ ಶುಲ್ಕಗಳಾದ ಸಗಟು ಮತ್ತು ಚಿಲ್ಲರೆ ಲಾಭಾಂಶ, ಸಾಗಾಣಿಕೆ ಶುಲ್ಕಗಳಿಗೆ ಪಾವತಿಸಬೇಕಾದ ರೂ.24410.22ಲಕ್ಷಗಳನ್ನು ಈ ಕೆಳಕಂಡ ಕೋಷ್ಟಕದನ್ವಯ 2025-26ನೇ ಸಾಲಿನ ಲೆಕ್ಕ ಶೀರ್ಷಿಕ:2408-01-196-0-01 (2408-00-101-0-01) DBT under Annabhagya Schemeರಡಿ ಬಿಡುಗಡೆ ಮಾಡಲು ಸರ್ಕಾರವು ನಿರ್ಧರಿಸಿ, ಖಜಾನೆ-2 ತಂತ್ರಾಂಶದ ಮೂಲಕ ಆಡಳಿತ ಇಲಾಖೆಯ ಹಂತದಿಂದ ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತಿ, ಬೆಂಗಳೂರು ನಗರ ಜಿಲ್ಲೆ ಇವರಿಗೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಫೆಬ್ರವರಿ-2025ರಿಂದ ಮೇ-2025ರ ಮಾಹೆಯವರೆಗೂ ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿಯನ್ನು ಹೊರತುಪಡಿಸಿ ಪ್ರಾಸಂಗಿಕ ಶುಲ್ಕಗಳಾದ ಸಗಟು ಮತ್ತು ಚಿಲ್ಲರ ಲಾಭಾಂಶ, ಸಾಗಾಣಿಕೆ ಶುಲ್ಕಗಳಿಗೆ ಪಾವತಿಸಬೇಕಾದ ರೂ.24410.22ಲಕ್ಷಗಳನ್ನು ಈ ಕೆಳಕಂಡ ಕೋಷ್ಟಕದನ್ವಯ 2025-26 Bear:2408-01-196-0-01(2408-00-101-0-01)DBT under Annabhagya Schemeರಡಿ ಖಜಾನೆ-2 ತಂತ್ರಾಂಶದ ಮೂಲಕ ಆಡಳಿತ ಇಲಾಖೆಯ ಹಂತದಿಂದ ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತಿ, ಬೆಂಗಳೂರು ನಗರ ಜಿಲ್ಲೆ ಇವರಿಗೆ ಬಿಡುಗಡೆ ಮಾಡಿ ಆದೇಶಿಸಿದೆ.