ಬೆಂಗಳೂರು: ಹೊಸಕೋಟೆ ಹಾಗೂ ನೆಲಮಂಗಲ ಪಟ್ಟಣಗಳಲ್ಲಿ ನಡೆದಿದ್ದಂತ ಭ್ರೂಣ ಹತ್ಯೆ ಕಾನೂನು ಬಾಹಿರ ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ಹೊಸಕೋಟೆ ನಗರದ (1) ಎಸ್.ಪಿ.ಜಿ. ಆಸ್ಪತ್ರೆ, (2) ಓವಮ್ ಆಸ್ಪತ್ರೆ, ಹೊಸಕೋಟೆ (3) ನೆಲಮಂಗಲದ ಅಸರಾ ಆಸ್ಪತ್ರೆ, ಈ ಖಾಸಗಿ ಆಸ್ಪತ್ರೆಗಳು ಪಿಸಿ & ಪಿಎನ್‌ಡಿಟಿ ಮತ್ತು ಎಂ.ಟಿ.ಪಿ. ಕಾಯ್ದೆ ಉಲ್ಲಂಘಿಸಿ, ಪರವಾನಗಿ ಪಡೆಯದೇ ಗರ್ಭಪಾತಗಳನ್ನು ಅನಧಿಕೃತವಾಗಿ ನಡೆಸುತ್ತಿರುವ ಕುರಿತಾದ ತಪಾಸಣೆ ಮಾಡಲು ಜಿಲ್ಲಾ ಸಕ್ಷಮ ಪ್ರಾಧಿಕಾರ ಪ್ರತ್ಯಾಯೋಜಿತ ಅಧಿಕಾರ ಪಡೆದು ಹಾಗೂ ಈ ಖಾಸಗಿ ಆಸ್ಪತ್ರೆಗಳ ಅನಧಿಕೃತ ಕಾರ್ಯಗಳ ಬಗ್ಗೆ ಮಾಹಿತಿ ಒದಗಿಸಿರುತ್ತೇನೆಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯು ವರದಿ ಸಲ್ಲಿಸುತ್ತಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಂದ ತಮ್ಮ ಕರ್ತವ್ಯಕ್ಕೆ ಅಡಚಣೆ ಯುಂಟಾಗುತ್ತಿರುವುದರಿಂದ ತಮಗೆ ರಜೆ ಮೇಲೆ ತೆರಳಲು ಅನುಮತಿ ನೀಡುವಂತೆ ಹಾಗೂ ಜಿಲ್ಲಾ ಆಕುಕ ಅಧಿಕಾರಿಗಳ ಒತ್ತಡ ತಾಳದೆ ತಾವು ಸತ್ತರೆ ಜಿಲ್ಲಾ ಆಕುಕ ಅಧಿಕಾರಿಗಳೆ ಹೊಣೆಯೆಂದು ಪ್ರಕಟಣೆ ನೀಡಿ ಈ ಕುರಿತು ಸಮಗ್ರ ತನಿಖೆ ನಡೆಸಲು ಸಮಿತಿ ರಚಿಸಲು ಹಾಗೂ ತಪ್ಪಿತಸ್ತರ ಮೇಲೆ ಕ್ರಮ ಜರುಗಿಸುವಂತೆ ಉಲ್ಲೇಖ (2)ರ ಪತ್ರದಲ್ಲಿ ಕೋರಿರುತ್ತಾರೆ ಎಂದಿದ್ದಾರೆ.
ಈ ಪಕರಣಗಳ ಕುರಿತಾದ ಉಲ್ಲೇಖ(3)ರ ಪತ್ರದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಈ ಖಾಸಗಿ ಆಸ್ಪತ್ರೆಗಳ ಅಕ್ರಮಗಳ ಕುರಿತು ವಹಿಸಿರುವ ಕ್ರಮದ
ಮಾಹಿತಿಯನ್ನು ಸರಿಯಾಗಿ ಒದಗಿಸಿರುವುದಿಲ್ಲವೆಂದು ಸದರಿ ಅಧಿಕಾರಿಯವರ ಸೇವೆ ಅಗತ್ಯವಿಲ್ಲವೆಂದು ಸದರಿಯವರನ್ನು ವರ್ಗಾಯಿಸುವಂತೆ ಕೋರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಸ್ತಾಪಿಸಿರುತ್ತಾರೆ.
ಈ ವಿಷಯಗಳು ದಿನಾಂಕ 22.03.2024ರ ವಿಜಯ ಕರ್ನಾಟಕ ದಿನಪತ್ರಿಕೆ ಪಕಟವಾಗಿರುವುದಲ್ಲದೆ, ಟೈಮ್ಸ್ ನ್ಯೂಸ್ ನೆಟ್‌ವರ್ಕನಲ್ಲಿ ಲೈವ್ ನ್ಯೂಸನಲ್ಲಿ ಪುಸಾರಗೊಂಡು ಇಲಾಖೆಯ ಮುಖ್ಯಸ್ಥರು ಈ ಬಗ್ಗೆ ಯಾವುದೇ ಕ್ರಮ ಜರಗಿಸಿಲ್ಲವೆಂದು ಸುದ್ದಿ ಪ್ರಕಟವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹಾಗೂ ನೆಲಮಂಗಲ ಪಟ್ಟಣಗಳಲ್ಲಿ ಪಿಸಿ & ಪಿಎನ್‌ಡಿಟಿ ಮತ್ತು ಎಂ.ಟಿ.ಪಿ. ಕಾಯ್ದೆ ಉಲ್ಲಂಘನೆ, ಖಾಸಗಿ ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆ ಕಾನೂನು ಬಾಹಿರ ಗರ್ಭಪಾತ ಪಕರಣದಲ್ಲಿ ಜಿಲ್ಲಾ ಆಕುಕ ಅಧಿಕಾರಿ ಮತ್ತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಇವರುಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ, ಅಹವಾಲುಗಳನ್ನು ಸಲ್ಲಿಸಿಕೊಂಡಿರುವುದರಿಂದ, ಈ ಕುರಿತು ಕೂಲಂಕಷವಾಗಿ ಪರಿಶೀಲಿಸಿ, ಮೇಲಿನ ಎಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸಲು ಯೋಜನಾ ನಿರ್ದೇಶಕರು (ಆರ್.ಸಿ.ಹೆಚ್) ರವರ ನೇತೃತ್ವದಲ್ಲಿ ಈ ಕೆಳಕಂಡ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಿ ಆದೇಶಿಸಿದೆ.
1) ಯೋಜನಾ ನಿರ್ದೇಶಕರು (ಆರ್.ಸಿ.ಹೆಚ್) ಆಕುಕ ಸೇವೆಗಳು ಆರೋಗ್ಯಸೌಧ, 2) ಉಪನಿರ್ದೇಶಕರು (ವೈದ್ಯಕೀಯ / (ಪಿಸಿ ಪಿಎನ್‌ಡಿಟಿ)
ಆಕುಕ ಸೇವೆಗಳು ಆರೋಗ್ಯ ಸೌಧ,
3) ಉಪ ನಿರ್ದೇಶಸಕರು(ಕುಟುಂಬ ಕಲ್ಯಾಣ) ಆಕುಕ ಸೇವೆಗಳು ಆರೋಗ್ಯ ಸೌಧ,
ಈ ತಂಡವು ಆಸ್ಪತ್ರೆಗಳಿಗೆ/ಜಿಲ್ಲಾ ಆಕುಕ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿಗೆ ಭೇಟಿ ನೀಡಿ, ಇದರೊಂದಿಗೆ ಲಗತ್ತಿಸಿರುವ ಹೇಳಿಕೆಗಳು ಪ್ರಕಟಣೆಗಳ ಮೇರೆಗೆ ಪರಿಶೀಲಿಸಿ, ಎಲ್ಲಾ ಅಂಶಗಳ ಕುರಿತು ವಾಸ್ತವಾಂಶದ ತನಿಖೆ ನಡೆಸಿ, ಸೂಕ್ತ ದಾಖಲೆಗಳೊಂದಿಗೆ ವಿವರವಾದ ವರದಿಯನ್ನು ದಿನಾಂಕ:26.03.2024ರೊಳಗೆ ಆಯುಕ್ತಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ.
BREAKING : ದೆಹಲಿ ಸಿಎಂ ‘ಕೇಜ್ರಿವಾಲ್’ ಅಸ್ವಸ್ಥ : ‘Bp’ ಲೋ, ಕೋರ್ಟ್’ನಿಂದ ಹೊರ ಕರೆತಂದ ಅಧಿಕಾರಿಗಳು
BREAKING : ‘ಕಾಂಗ್ರೆಸ್’ಗೆ ‘ಕೋರ್ಟ್’ ಶಾಕ್ : ‘ಆದಾಯ ತೆರಿಗೆ ಮರು ಮೌಲ್ಯಮಾಪನ’ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ