ಬೆಂಗಳೂರು : ಹೃದಯ ರೋಗ ಸಂಬಂಧಿ ಸಾವುಗಳನ್ನು ತಡೆಯಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸ್ಟೆಮಿ ಕಾರ್ಯಕ್ರಮವನ್ನು ಹೊಸದಾಗಿ 77 ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ.
2025-26ನೇ ಸಾಲಿಗೆ STEMI Management Project ಅನ್ನು ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳು ಮತ್ತು 147 ತಾಲ್ಲೂಕು ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ.
2023-24ನೇ ಸಾಲಿನ ರಾಜ್ಯದ ಆಯವ್ಯಯದ ಕಂಡಿಕೆ-115ರಲ್ಲಿ “ಕರ್ನಾಟಕ ರತ್ನ ಡಾ|| ಪುನೀತ್ ರಾಜ್ ಕುಮಾರ್” ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಯಲು Automated External Defibrillator ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ ರೂ. ಆರು ಕೋಟಿ ಅನುದಾನ ಒದಗಿಸಲಾಗುವುದು” ಎಂದು ಘೋಷಿಸಿರುತ್ತಾರೆ.
ಮೇಲೆ ಓದಲಾದ (2)ರ ಆದೇಶದಲ್ಲಿ, Automated External Defibrillator ಗಳನ್ನು ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲು ಈ ಕೆಳಕಂಡಂತೆ ಕ್ರಮಗಳನ್ನು ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.
i. STEMI ಕಾರ್ಯಕ್ರಮ ವಿಸ್ತರಿಸಲು ರೂ.3.00 ಕೋಟಿ.
ii. RGUHSನಿಂದ ನೊಂದಾಯಿತ ಜೀವರಕ್ಷಾ ಟ್ರಸ್ಟ್ ಇವರಿಂದ ತರಬೇತಿ ನೀಡಲು ರೂ.1.50 ಕೋಟಿ.
iii. AED ಉಪಕರಣಗಳ ಖರೀದಿಗೆ ರೂ.50.00 ಲಕ್ಷ.
iv. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ AED ಉಪಕರಣಗಳನ್ನು ಆಸ್ಪತ್ರೆಗಳ ARS / ABRK ನಿಧಿಯಿಂದ ಖರೀದಿಸಲು.