ಮೈಸೂರು: ಸಿಕಲ್ ಸಿಲ್ ಅನೀಮಿಯಾ ಹರಡದಂತೆ ತಡಗಟ್ಟುವ ನಿಟ್ಟಿನಲ್ಲಿ ‘ಪ್ರಾಜೆಕ್ಟ್ ಚಂದನ’ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೈಸೂರಿನಲ್ಲಿ ಇಂದು ಚಾಲನೆ ನೀಡಿದರು.
ಈ ಬಳಿಕ ಮಾತನಾಡಿದ ಸಚಿವರು, ಈಗಾಗಲೇ ಆರೋಗ್ಯ ಇಲಾಖೆ ಸಿಕಲ್ ಸೆಲ್ ಗೆ ತುತ್ತಾಗಿರುವವರಿಗೆ ಉಚಿತ ಚಿಕಿತ್ಸೆ, ಉತ್ತಮ ಆರೈಕೆ ಒದಗಿಸಲಾಗುತ್ತಿದ್ದು, ರೋಗ ಹರಡದಂತೆ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಇದೀಗ ‘ಪ್ರಾಜೆಕ್ಟ್ ಚಂದನ’ದ’ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ 256000 ಲಕ್ಷ ಬಡಕಟ್ಟು ಜನರ ತಪಾಸಣೆ ನಡೆಸುವುದರ ಜೊತೆಗೆ ಅಗತ್ಯ ಚಿಕಿತ್ಸೆ ಕಲ್ಪಿಸಲಾಗುವುದು ಎಂದರು.
ಈ ರೋಗದ ವಿರುದ್ಧ ಹೋರಾಡಲು ಅನೇಕ ಎನ್‌ಜಿಒಗಳು ಸಕ್ರಿಯವಾಗಿ ತೊಡಗಿಸಿಕೊಂಡಿವೆ. ವಿಶೇಷವಾಗಿ ಭಾರತೀಯ ವಿಜ್ಞಾನ ಸಂಸ್ಥೆಯು 2 ವರ್ಷಗಳ ಅವಧಿಗೆ ಸಂಪೂರ್ಣ ತಪಾಸಣೆ, ತರಬೇತಿ, ಜಾಗೃತಿ, ಮಾದರಿ ಸಾರಿಗೆ ಮತ್ತು ಸಂಪರ್ಕ ಸೇವೆಗಳಿಗಾಗಿ ಮೈಸೂರು, ಚಾಮರಾಜನಗರ ಮತ್ತು ಕೊಡಗಿನ 3 ಜಿಲ್ಲೆಗಳನ್ನು ದತ್ತು ತೆಗೆದುಕೊಳ್ಳುವ ಪ್ರಸ್ತಾವನೆಯೊಂದಿಗೆ GoK ಅನ್ನು ಸಂಪರ್ಕಿಸಿದೆ. IISc ಪ್ರೊಫೆಸರ್ ಸಾಯಿ ಅವರು ಸಂಶೋಧಿಸಿರುವ ನವೀನ ಸಾಧನದಿಂದ ಸ್ಟೀನಿಂಗ್ ಮಾಡಲಾಗುವುದು.. ಈ ಯೋಜನೆಯನ್ನು “ಪ್ರಾಜೆಕ್ಟ್ ಚಂದನ” ಎಂದು ಘೋಶಿಸಲಾಗಿದ್ದು, ಯೋಜನೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ CSR ಅಡಿಯಲ್ಲಿ 18 ಕೋಟಿ ವಿನಿಯೋಗಿಸ ಮುಂದೆ ಬಂದಿರುವುದಕ್ಕೆ ಸಚಿವ ಗುಂಡೂರಾವ್ ಶ್ಲಾಘನೆ ವ್ಯಕ್ತಪಡಿಸಿದರು.
ಕರ್ನಾಟಕದ ಬುಡಕಟ್ಟು ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಅನಿಮೀಯಾ ರಕ್ತಹೀನತೆಯ ಸಮಗ್ರ ತಪಾಸಣೆ ಮತ್ತು ಆರೋಗ್ಯ ನಿರ್ವಹಣೆಗಾಗಿ Gok- IISc-IOCL ನಡುವೆ MOUಗೆ ಸಚಿವ ದಿನೇಶ್ ಗುಂಡೂರಾವ್ ಸಹಿ ಹಾಕಿದರು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಈ ರೀತಿಯ ಸಿಎಸ್ ಆರ್ ಫಂಡ್ ಹೆಚ್ಚಿನ ರೀತಿಯಲ್ಲಿ ಹರಿದುಬರಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಪೋರೇಟ್ ಕಂಪನಿಗಳು ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಕಲ್ ಸೆಲ್ ಜೆನಿಟಿಕ್ ಕೌನ್ಸೆಲಿಂಗ್ ಕಾರ್ಡ್ ವಿತರಣೆ
ಇದೇ ವೇಳೆ ಸಿಕಲ್ ಸೆಲ್ ಅನುಮೀಯಾ ರೋಗ ಪತ್ತೆಯಾದವರಿಗೆ ಸಾಂಕೇತಿಕವಾಗಿ ವಿಶೇಷ ಜೆನೆಟಿಕ್ ಕೌನ್ಸೆಲಿಂಗ್ ಕಾರ್ಡ್ ವಿತರಿಸಲಾಯಿತು. ಕಾರ್ಡ್ ಪಡೆದವರಿಗೆ ಉಚಿತ ಚಿಕಿತ್ಸೆ ಮತ್ತು ಉಚಿತ ರಕ್ತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮುಖ್ಯವಾಗಿ ಹೈಡ್ರಾಕ್ಸಿಯುರಿಯಾ ಮಾತ್ರೆಗಳು, ಹೆಚ್ಚುವರಿ ರೋಗನಿರೋಧಕಗಳು ಮತ್ತು ಸರ್ಕಾರಿ ಸೌಲಭ್ಯಗಳಲ್ಲಿ ಉಚಿತ ರಕ್ತವನ್ನು ನೀಡಲಾಗುತ್ತದೆ. ಸಿಕಲ್ ಸೆಲ್ ಅನಿಮೀಯಾ ರೋಗಕ್ಕೆ ತುತ್ತಾದವರಲ್ಲಿ 55 ಜನರನ್ನ ಅಂಗವೈಕಲ್ಯ ಎಂದು ಗುರುತಿಸಲಾಗಿದ್ದು, UDID Card ಪಡೆಯಲು ಅರ್ಹರಾಗಿರುತ್ತಾರೆ. ಸಿಕಲ್ ಸೆಲ್ ಅನೀಮಿಯಾ ರೋಗಿಗಳ ನೋಂದಣಿಗಾಗಿ ಆನ್‌ಲೈನ್ ರಿಜಿಸ್ಟ್ರಿ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ.
ಕರ್ನಾಟಕದಲ್ಲಿ 7 ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡದಲ್ಲಿ ಒಟ್ಟು 352187 ಜನಸಂಖ್ಯೆಯನ್ನು ಸಿಕಲ್ ಸೆಲ್ ಅನೀಮಿಯಾಗೆ ಪರೀಕ್ಷಿಸಲಿದ್ದು, ಜೇನುಕುರುಬ, ಬೆಟ್ಟಕುರುಬ, ಬೇಡ, ಯರವ, ಈಡಿಗ ಮತ್ತು ನಾಯಕರಂತಹ ಆರು ಪ್ರಮುಖ ಬುಡಕಟ್ಟು ಜನಾಂಗದವರಿಗೆ ಆದ್ಯತೆ ನೀಡಲಾಗುವುದು ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
BIG NEWS: ‘ರಾಜ್ಯ ಸರ್ಕಾರಿ ನೌಕರ’ರು ತಪ್ಪದೇ ಈ ಕೆಲಸ ಮಾಡುವಂತೆ ಸರ್ಕಾರ ಸೂಚನೆ