ಬೆಂಗಳೂರು : ಮದರಸಾಗಳ ನಿರ್ವಹಣೆಗೆ ಪ್ರತ್ಯೇಕ ಮಂಡಳಿ ರಚಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಈ ಮೂಲಕ ಮದರಸಾಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ
. ಉತ್ತರ ಪ್ರದೇಶ, ಉತ್ತರಾಖಂಡ ಮಾದರಿಯಲ್ಲಿ ಮಂಡಳಿ ರಚಿಸಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದ್ದು, ರಾಜ್ಯದಲ್ಲಿರುವ ನೊಂದಾಯಿತ 966 ಮದರಾಸಗಳನ್ನ ಈ ಮಂಡಳಿ ವ್ಯಾಪ್ತಿಗೆ ತರಲು ಪ್ರಕ್ರಿಯೆ ಆರಂಭವಾಗಿದ್ದು, ನೊಂದಾಯಿಸಿಕೊಳ್ಳದ ಮದರಸಾಗಳಿಗೂ ನೊಂದಣಿ ಕಡ್ಡಾಯಗೊಳಿಸಲಾಗುವುದು ಎಂದು ತಿಳಿದುಬಂದಿದೆ.
ಇಸ್ಲಾಂ ಧಾರ್ಮಿಕತೆ ಬೋಧಿಸುವ ಜೊತೆ ಜೊತೆಗೆ ಸಾಮಾನ್ಯ ಶಾಲೆಗಳಲ್ಲಿನ ಔಪಚಾರಿಕ ಶಿಕ್ಷಣ ನೀಡಲು ಯೋಜನೆ ಹಮ್ಮಿಕೊಂಡಿದ್ದು, ಸಾಮಾನ್ಯ ಶಾಲೆಗಳಂತೆ ನಿತ್ಯ ರಾಷ್ಟ್ರಗೀತೆ ಹಾಡಿಸುವುದನ್ನು ಈ ಮಂಡಳಿಯು ಮದರಸಾಗಳಲ್ಲಿ ಜಾರಿಗೆ ತರಲಿದೆ.
ಹಾಗೆ, ಪ್ರತಿ ಮದರಸಾಗೂ ಹಿಪ್ತ್ (ಕುರಾನ್ ಕಂಠ ಪಟಣ) ಹಾಗೂ ನಾಜಿಯ (ಧಾರ್ಮಿಕ ವಿಧಿ ಬೋಧನ) ನೇಮಿಸಲು ಸಿದ್ಧತೆ ನಡೆದಿದೆ. ಇದರ ಜೊತೆಗೆ ಮದರಸಾಗಳಲ್ಲಿನ ಮೂಲ ಸೌಕರ್ಯ, ಕಟ್ಟಡ ಅಭಿವೃದ್ದಿಗೂ ಮಂಡಳಿ ಮೂಲಕ ಕ್ರಮ ಕೈಗೊಳ್ಳಲಾಗಿದ್ದು
, ಸಿದ್ದರಾಮಯ್ಯ ಅವಧಿಯಲ್ಲಿ ಮಂಜೂರಾಗಿರುವ 50 ಕೋಟಿ ರೂಪಾಯಿಯನ್ನು ಬಳಸಲು ಈಗ ಬೊಮ್ಮಾಯಿ ಸರ್ಕಾರ ಅನುಮತಿಸಿದೆ. ಈ ಪೈಕಿ ಪ್ರತಿ ನೊಂದಾಯಿತ ಮದರಸಾ ಮೂಲಸೌಕರ್ಯ ಅಭಿವೃದ್ದಿಗೆ 10 ಲಕ್ಷ ರೂಪಾಯಿ ನಿಗದಿ ಮಾಡಿ ಅನುದಾನ ಬಳಕೆಗೆ ಸರ್ಕಾರ ಆದೇಶಿಸಿದೆ ಎಮದೂ ತಿಳಿದುಬಂದಿದೆ.