ಬೆಂಗಳೂರು: ರಾಜ್ಯದ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ( hsrp number plate ) ಅಳವಡಿಸುವುದು ಕಡ್ಡಾಯಗೊಳಿಸಲಾಗಿತ್ತು. ಹೀಗಿದ್ದೂ ಅನೇಕ ವಾಹನ ಸಾವರರು ನಂಬರ್ ಪ್ಲೇಟ್ ಅಳವಡಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಮತ್ತೆ ಅವಧಿಯನ್ನು ದಿನಾಂಕ 31-05-2024ರವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ( Karnataka Government ) ಅಧಿಕೃತ ಆದೇಶ ಹೊರಡಿಸಿದೆ.
ಈ ಸಂಬಂಧ ಸಾರಿಗೆ ಇಲಾಖೆಯ ( Transport Department ) ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್.1, 2019ಕ್ಕಿಂತ ಮೊದಲು ಖರೀದಿಸಿದಂತ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿವುದು ಕಡ್ಡಾಯಗೊಳಿಸಲಾಗಿದೆ ಎಂದಿದ್ದಾರೆ.
ಈ ಮೊದಲು HSRP ನಂಬರ್ ಪ್ಲೇಟ್ ಅಳವಡಿಸೋದಕ್ಕೆ ದಿನಾಂಕ 16-11-2023ರವರೆಗೆ ಅವಕಾಶ ನೀಡಲಾಗಿತ್ತು. ಆನಂತ್ರ ಅದನ್ನು ದಿನಾಂಕ 17-02-2024ರವರೆಗೆ ವಿಸ್ತರಿಸಲಾಗಿತ್ತು. ಆದ್ರೇ ಇನ್ನೂ ವಾಹನ ಸಾವರರು ಹೆಚ್ಚು ಕಾಲಾವಕಾಶ ಕೋರಿದ್ದರಿಂದ ದಿನಾಂಕ 31-05-2024ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ದಿನಾಂಕ 17-08-2023ರಂದು ರಾಜ್ಯ ಸಾರಿಗೆ ಇಲಾಖೆಯಿಂದ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸೋದಕ್ಕಾಗಿ ಹೊರಡಿಸಿದಂತ ಆದೇಶದಲ್ಲಿ ಬೇರೆ ಯಾವುದೇ ಮಾರ್ಪಾಡು ಮಾಡಲಾಗಿಲ್ಲ ಎಂಬುದಾಗಿ ಹೇಳಿದ್ದಾರೆ.