ಬೆಂಗಳೂರು: ದಾವಣಗೆರೆ ವೃತ್ತಿ ರಂಗಾಯಣದ ನಿರ್ದೇಶಕರನ್ನಾಗಿ ಮಲ್ಲಿಕಾರ್ಜುನ ಕಡಕೋಳ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಕಳೆದ ಎರಡು ವರ್ಷಕಾಲ ಖಾಲಿ ಇದ್ದ ಹುದ್ದೆಗೆ ನಿರ್ದೇಶಕರಾಗಿ ಕಡಕೋಳ ಮೂರು ವರ್ಷದ ಅವಧಿಗೆ ನೇಮಕವಾಗಿದ್ದಾರೆ.
ಈ ಹಿಂದೆ ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಂಗ ಸಮಾಜದ ಸದಸ್ಯರಾಗಿ ಬಾ ಅತಿಥಿ, ರಂಗ ಸಮಾಗಮ, ತಿಂಗಳ ಬೆಳಕಲಿ ರಂಗದ ಮೆರಗು ಮೊದಲಾದ ಕಾರ್ಯಕ್ರಮಗಳ ಮೂಲಕ ಕಡಕೋಳ ಅವರು ರಂಗಾಸಕ್ತರು ಮತ್ತು ಸರಕಾರದ ಗಮನ ಸೆಳೆದಿದ್ದರು.
ದಾವಣಗೆರೆ ವೃತ್ತಿ ರಂಗಾಯಣ ಸ್ಥಾಪನೆಯಲ್ಲೂ ಅವರ ಪರಿಶ್ರಮ ಗಮನಾರ್ಹ. “ವೃತ್ತಿ ರಂಗಭೂಮಿ : ವರ್ತಮಾನದ ಸವಾಲುಗಳು” ವಿಷಯದ ಮೇಲೆ ಫೆಲೋಶಿಪ್ ಮಾಡಿದ್ದಾರೆ.
ನಮ್ಮ ‘ಮೆಟ್ರೋ ರೈಲ್ವೆ ಪ್ರಯಾಣಿಕ’ರ ಗಮನಕ್ಕೆ: ಆ.13ರಿಂದ 15ರವರೆಗೆ ಈ ಮಾರ್ಗದಲ್ಲಿ ‘ಸಂಚಾರ ವ್ಯತ್ಯಯ’ | Namma Metro
BREAKING: ‘ಸರ್ಕಾರಿ ತಾಂತ್ರಿಕ ಕಾಲೇಜು’ಗಳ ‘ಅರೆಕಾಲಿಕ ಉಪನ್ಯಾಸಕ’ರಿಗೆ ಗೌರವಧನ ಹೆಚ್ಚಳ: ರಾಜ್ಯ ಸರ್ಕಾರ ಆದೇಶ
BIG NEWS: ತುಂಗಭದ್ರಾ ಅಣೆಕಟ್ಟು ಗೇಟ್ ದುರಸ್ತಿ ಕಾರ್ಯ ಆರಂಭ: ಡಿಸಿಎಂ ಡಿ.ಕೆ.ಶಿವಕುಮಾರ್