ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಾಮಾನ್ಯ ಸಮಿತಿಗೆ ಶಿವಮೊಗ್ಗದ ನಮ್ಮ ನಾಡು ಪತ್ರಿಕೆಯ ಸಿನಿಮಾ ವಿಶ್ಲೇಷಕರಾದಂತ ದೇಶಾದ್ರಿ ಹೊಸ್ಮನೆ ಸೇರಿದಂತೆ 7 ಮಂದಿಯನ್ನು ಸದಸ್ಯರನ್ನಾಗಿ ನೇಮಿಸಿ ಆದೇಶಿಸಿದೆ.
ಈ ಕುರಿತಂತೆ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೆಸಿಂತ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿಯಮಾವಳಿಯ ಕಂಡಿಕೆ IV(4.1)(2)ರ ಅನ್ವಯ ಪ್ರದತ್ತವಾದಂತ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಾಮಾನ್ಯ ಸಮಿತಿಯ ಸದಸ್ಯರನ್ನಾಗಿ ಸಾಮಾನ್ಯ ಸಮಿತಿಗೆ ನೇಮಿಸಲಾಗಿದೆ ಎಂದಿದೆ.
ಹೀಗಿದೆ ನೂತನ ಸಾಮಾನ್ಯ ಸಮಿತಿ ಸದಸ್ಯರ ಹೆಸರು
- ಸಾವಿತ್ರಿ ಮಜುಂದಾರ್, ಹಿರಿಯ ಪತ್ರಕರ್ತರು, ಕೊಪ್ಪಳ
- ಚಿದಾನಂದ ಪಟೇಲ್, ಹಿರಿಯ ಪತ್ರಕರ್ತರು, ಬೆಂಗಳೂರು
- ದೇಶಾದ್ರಿ ಹೆಚ್ ಹೊಸ್ಮನೆ, ಸಿನಿಮಾ ವಿಶ್ಲೇಷಕರು, ನಮ್ಮ ನಾಡು ಕನ್ನಡ ಡೈಲಿ, ಶಿವಮೊಗ್ಗ
- ನಿಖಿತಾ ಸ್ವಾಮಿ.ಎಸ್, ಸಿನಿಮಾ ಕಲಾವಿಧರು, ಬೆಂಗಳೂರು
- ಡಿ.ಜಿ ವೆಂಕಟೇಶ್, ಸಿನಿಮಾ ಪ್ರಚಾರಕರು, ಬೆಂಗಳೂರು
- ವಿಷ್ಣ ಕುಮಾರ್.ಎಸ್, ಚಿತ್ರೋದ್ಯಮಿ, ಮೈಸೂರು
- ಐವಾನ್ ಡಿಸಿಲ್ವ, ಸಿನಿಮಾ ತಂತ್ರಜ್ಞರು, ಬೆಂಗಳೂರು
ನೆರೆ ರಾಜ್ಯಗಳಿಂದ ಟ್ಯಾಂಕರ್ ನಲ್ಲಿ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆ
ALERT : ರಾಜ್ಯದ ಕಾರ್ಮಿಕರೇ ಎಚ್ಚರ : ಮೋಸದ ಕರೆಗಳು ಬಂದ್ರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತನ್ನಿ.!