ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಯಾಗಿರುವಂತ ಪ್ರತಾಪ್ ರೆಡ್ಡಿ ಅವರು, ಸ್ವಯಂ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಅವರನ್ನು ಏಪ್ರಿಲ್.30ರಂದು ಸೇವೆಯಿಂದ ನಿವೃತ್ತಿಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಈ ಕುರಿತಂತೆ ರಾಜ್ಯ ಸರ್ಕಾರಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ಸ್ವಯಂ ನಿವೃತ್ತಿ ಕೋರಿ ಪತ್ರವನ್ನು ಬರೆದಿದ್ದರು. ಅವರ ಪತ್ರವನ್ನು ಅಂಗೀಕರಿಸಿರುವಂತ ರಾಜ್ಯ ಸರ್ಕಾರವು, ಏಪ್ರಿಲ್.30ಕ್ಕೆ ಇಲಾಖೆಯಿಂದ ಬಿಡುಗಡೆಗೆ ಆದೇಶಿಸಿದೆ.
ಅಂದಹಾಗೇ ಪ್ರತಾಪ್ ರೆಡ್ಡಿ ಅವರು ಸದ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಅವರು ನಿವೃತ್ತಿಗೆ 2 ತಿಂಗಳು ಬಾಕಿ ಇರುವಾಗಲೇ ಇಲಾಖೆಯಿಂದ ಬಿಡುಗಡೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಪುರಸ್ಕರಿಸಿರುವಂತ ರಾಜ್ಯ ಸರ್ಕಾರ ಏಪ್ರಿಲ್.30ಕ್ಕೆ ಬಿಡುಗಡೆಗೊಳಿಸುವಂತೆ ಸೂಚಿಸಿ ಆದೇಶಿಸಿದೆ.
BREAKING: ಫೆ.29ರವರೆಗೆ ಕೇಂದ್ರದಿಂದ ‘ಕಲಿಕಾ, ಚಾಲನಾ ಪರವಾನಗಿ, ಕಂಡಕ್ಟರ್ ಲೈಸೆನ್ಸ್’ ಅವಧಿ ವಿಸ್ತರಣೆ
BREAKING : ‘ಕ್ರಿಕೆಟ್’ಗೆ ಮರಳಲು ‘ರಿಷಭ್ ಪಂತ್’ ರೆಡಿ ; 2024ರ ‘IPL ಪಂದ್ಯಾವಳಿ’ಯಲ್ಲಿ ಭಾಗಿ : ವರದಿ