ಬೆಂಗಳೂರು: ಮುಡಾ ಹಗರಣ ಆರೋಪ ಎದುರಿಸುತ್ತಿರುವಂತ ಸಿಎಂ ಸಿದ್ಧರಾಮಯ್ಯ ಅವರು ಬೀಸೋ ದೊಣ್ಣೆಯ ಏಟಿನಿಂದ ತಪ್ಪಿಸಿಕೊಳ್ಳುವ ಹಾಗೆ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದೇ ಸಿಬಿಐ ಮುಕ್ತ ಅನುಮತಿ ಅಧಿಸೂಚನೆ ವಾಪಾಸ್ಸಿಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಬಳಿಕ ಸಂಪುಟದ ನಿರ್ಧಾರಗಳನ್ನು ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರಿಗೆ ಕಾನೂನ ಸಚಿವ ಹೆಚ್.ಕೆ ಪಾಟೀಲ್ ವಿವರಿಸಿದರು.
ಮೂಡ ಪ್ರಕರಣದಲ್ಲಿಸರ್ಕಾರದ ರಕ್ಷಣಾ ನಡೆ ಎನ್ನುವಂತೆ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಬಿಐ ತನಿಖೆ ಭೀತಿಯಿಂದ ರಕ್ಣಣೆಗೆ ಸಂಪುಟ ಮುಂದಾಗಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಕಾನೂನು ಸಂಕಷ್ಟದಿಂದ ರಕ್ಷಣೆ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ. ಸಿಬಿಐ ಮುಕ್ತ ಅನುಮತಿ ನೀಡಿರುವ ಅಧಿಸೂಚನೆ ವಾಪಸ್ಸಿಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಬಿಐ ಮುಕ್ತ ಅನುಮತಿ ಅಧಿಸೂಚನೆಯನ್ನು ವಾಪಸ್ ಪಡೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಬಿಐ ಎಂಟ್ರಿಗೆ ಅವಕಾಶ ನೀಡಲಾಗಿತ್ತು. ನೇರವಾಗಿ ತನಿಖೆ ನಡೆಸಲು ಅವಕಾಶವನ್ನು ಈ ಹಿಂದಿನ ಸರ್ಕಾರ ನೀಡಿತ್ತು. ಈಗ ಸಿಬಿಐ ಮುಕ್ತ ತನಿಖೆಗೆ ಇದ್ದ ಕಾಯ್ದೆ ವಾಪಸ್ ಪಡೆಯಲಾಗಿದೆ.
Delhi Special Police Establishment Act, 1946 ಅಡಿ ಅವಕಾಶ ಇತ್ತು. ಈಗ ಆ ಮುಕ್ತ ಅವಕಾಶದ ಬಿಲ್ ವಾಪಸ್ ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದೆ ಹಲವು ರಾಜ್ಯಗಳ ಇದನ್ನ ವಾಪಸ್ ಪಡೆದಿದ್ದವು. ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ವೆಸ್ಟ್ ಬೆಂಗಾಲ್,ರಾಜಸ್ತಾನ,ಕೇರಳ ನಿಷೇಧ ತಂದಿದ್ದವು. ತೆಲಂಗಾಣ ಸರ್ಕಾರ ಕೂಡ ಇತ್ತೀಚೆಗೆ ವಾಪಸ್ ಪಡೆದಿತ್ತು. ಗೌರ್ನರ್ ಹಸ್ತಕ್ಷೇಪ ಖಂಡಿಸಿ ತಂದಿದ್ದವು. ಇದೀಗ ರಾಜ್ಯ ಸರ್ಕಾರ ಕೂಡ ವಾಪಸ್ ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಕೇಂದ್ರದ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕಲಾಗಿದೆ.
SHOCKING : ಮಹಾಲಕ್ಷ್ಮಿ ನನ್ನ ಮಗನ ವಿರುದ್ಧ ‘ಹನಿಟ್ರ್ಯಾಪ್’ ಮಾಡಿದ್ದಳು : ಆರೋಪಿಯ ತಾಯಿ ಸ್ಪೋಟಕ ಹೇಳಿಕೆ!