ಯಾದಗಿರಿ : ರಾಜ್ಯ ಬಿಜೆಪಿ ಕಚೇರಿಗೆ ಬಾಂಬ್ ಬೆದರಿಕೆ ದಾಳಿ ವಿಚಾರವಾಗಿ ಯಾದಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಪುರ ಅವರು ಮಾತನಾಡಿ, ಎನ್ಐಎ ಕೇಂದ್ರದ ಕೈಕೊಂಬೆಯಾಗಿದ್ದು, ಕೇಂದ್ರ ಹೇಳಿದಂತೆ ತನಿಖಾ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ. ಹಾಗಾಗಿ ರಾಜ್ಯ ಬಿಜೆಪಿ ಕಚೇರಿಗೆ ಬಾಂಬ್ ಬೆದರಿಕೆ ದಾಳಿ ಸುದ್ದಿ ಸುಳ್ಳು ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್ಐಎ ವರದಿ ಕೊಟ್ಟಿದೆ ಅಂದರೆ ಎನ್ಐಎ ಅವರದ್ದೇ ಇದೆ. ಎನ್ಐಎ ಅಧಿಕಾರಿಗಳು ಬೇಕಾದ್ದು ವರದಿ ಕೊಡುತ್ತಾರೆ. ಬೆದರಿಕೆ ಇದೆ ಅಂದರೆ ಕೇಂದ್ರ ಗುಪ್ತಚರ ಇಲಾಖೆ ವೈಫಲ್ಯ ಆಗಿದೆ ಎಂದು ಅರ್ಥ. ಹಾಗಾದರೆ ಪ್ರಧಾನಿ ಸ್ಥಾನಕ್ಕೆ ಮೋದಿ ಅವರು ರಾಜೀನಾಮೆ ಕೊಡುತ್ತಾರ? ರಾಜ್ಯ ಬಿಜೆಪಿ ಕಚೇರಿಗೆ ಬಾಂಬ್ ದಾಳಿ ಬೆದರಿಕೆ ಸುಳ್ಳು ಸುದ್ದಿ ಕೇಂದ್ರ ತನಿಖಾ ಏಜೆನ್ಸಿಗಳು ಕೇಂದ್ರ ಸರ್ಕಾರದ ಕೈ ಗೊಂಬೆ ಆಗಿವೆ ಎಂದರು.