ಬೆಂಗಳೂರು : ನಟ ದರ್ಶನ್ ನಟಿಸಿರುವ ಕಾಟೇರ ಚಲನಚಿತ್ರ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇತ್ತೀಚಿಗೆ ಬೆಂಗಳೂರಿನ ಜೆಟ್ಲಾಗ್ ಪಬ್ನಲ್ಲಿ ನಟ ದರ್ಶನ್ ಸೇರಿದಂತೆ ಹಲವು ಚಿತ್ರರಂಗದ ಕಲಾವಿದರು ಸಂಭ್ರಮಾಚರಣೆ ಮಾಡಿದ್ದರು.ಸೆಲೆಬ್ರಿಟಿ ಶೋ ಮುಗಿದ ಬಳಿಕ ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಜೆಟ್ ಲ್ಯಾಗ್ ಪಬ್ನಲ್ಲಿ ಸೆಲೆಬ್ರಿಟಿಗಳು ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಸೆಲೆಬ್ರಿಟಿಗಳನ್ನು ಕರೆದು ವಿಚಾರಣೆ ಕೂಡ ಮಾಡಲಾಗಿತ್ತು. ಈಗ ಸುಬ್ರಹ್ಮಣ್ಯ ನಗರ ಪೊಲೀಸರು ಪ್ರಕರಣದ ತನಿಖಾ ವರದಿ ತಯಾರು ಮಾಡಿದ್ದಾರೆ. ಕಮಿಷನರ್ ದಯಾನಂದ್ ಸೂಚನೆ ಮೇರೆಗೆ ಮಲ್ಲೇಶ್ವರದ ಎಸಿಪಿ ಈ ವರದಿ ಸಿದ್ಧ ಮಾಡಿದ್ದಾರೆ. ಇದೀಗ ನಾಳೆ ತನಿಖಾ ವರದಿ ಸಲ್ಲಿಕೆ ಆಗಲಿದೆ.
ಇನ್ನು ತನಿಖೆಯ ವೇಳೆ ನಟ ದರ್ಶನ ಅವರಿಗೆ ಪೊಲೀಸ್ ಅಧಿಕಾರಿಗಳು ಗಾಂಜಾ ಬಳಕೆ ಆಗಿತ್ತೇ ಎಂದು ದರ್ಶನ್ಗೆ ಪೊಲೀಸರು ಪ್ರಶ್ನೆ ಮಾಡಿದ್ದರಂತೆ. ಈ ಪ್ರಶ್ನೆಗೆ ದರ್ಶನ್ ಗರಂ ಆಗಿದ್ದರು ಎನ್ನಲಾಗಿದೆ. ‘ಗಾಂಜಾ ಬಗ್ಗೆ ಏಕೆ ಕೇಳುತ್ತಿದ್ದೀರಿ? ಯಾವುದಾದ್ರೂ ಮಾಧ್ಯಮದಲ್ಲಿ ಆ ಬಗ್ಗೆ ಬಂದಿದೆಯೇ’ ಎಂದು ದರ್ಶನ್ ಮರು ಪ್ರಶ್ನೆ ಹಾಕಿದ್ದಾರೆ ಎನ್ನಲಾಗಿದೆ. ಜೊತೆಗೆ ಯಾವುದೇ ಮಾದಕ ವಸ್ತು ಸೇವನೆ ಆಗಿಲ್ಲ ಎಂದು ದರ್ಶನ್ ಉತ್ತರಿಸಿದ್ದಾರೆ.
ಊಟ ಮಾಡಿ ಕೆಲ ಹೊತ್ತು ಸಿನಿಮಾದ ಮಾತುಕತೆ ಹಿನ್ನೆಲೆ ಲೇಟಾಗಿದೆ ಎಂದು ಸೆಲೆಬ್ರಿಟಿಗಳು ಉತ್ತರಿಸಿದ್ದಾರೆ. ಎಲ್ಲರನ್ನೂ ನಾನೇ ಕರೆದಿದ್ದು. ಪಬ್ ಹೊರಗೆ ದರ್ಶನ್ ಬರುವಾಗ ಜನ ಸೇರಿದ್ದರು. ಹೀಗಾಗಿ ಒಂದಷ್ಟು ತೊಂದರೆಯಾಯ್ತು. ಎಲ್ಲಿಯೂ ಕಾನೂನಿನ ನಿಯಮ ಉಲ್ಲಂಘನೆ ಆಗಿಲ್ಲ ಎಂದು ರಾಕ್ಲೈನ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.