ಚಿತ್ರದುರ್ಗ: ಚಿತ್ರದುರ್ಗದ ಮುರಘಾಮಠದ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಮಠದ ಶಿವಮೂರ್ತಿ ಶ್ರೀಗಳನ್ನು ಬಂಧಿಸಲಾಗಿದೆ. ಸದ್ಯ ಅವರನನ್ನು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದ್ದು, ಚಿತ್ರದುರ್ಗದ ಜಿಲ್ಲಾ ಕಾರಾಗೃಹ ಕರೆದೊಯ್ಯಲಾಗಿದೆ.ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಆದರೆ ಇದೀಗ ಮುರುಘಾ ಮಠದಿಂದಲೇ ಸ್ವಾಮೀಜಿಗೆ ಉಪಹಾರವನ್ನು ತಂದು ಕೊಟ್ಟಿದ್ದಾರೆ. ಅವರು ಏನು ಪ್ರತಿನಿತ್ಯ ಸೇವನೆ ಮಾಡುವಂತಹ ಆಹಾರವನ್ನೇ ತಂದು ಕೊಟ್ಟಿದ್ದಾರೆ.