ಮೈಸೂರು : ಆರ್ ಎಸ್ ಎಸ್ ಬ್ಯಾನ್ ಮಾಡಬೇಕೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಅವರೇನು ದೇಶದ್ರೋಹಿ ಕೆಲಸ ಮಾಡ್ತಾರಾ..? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯಗೆ ಏನು ಮಾತನಾಡುತ್ತೀನಿ ಎನ್ನುವುದು ಗೊತ್ತಾಗಲ್ಲ, ಆರ್ ಎಸ್ ಎಸ್ ಬ್ಯಾನ್ ಮಾಡುವ ನೆಸೆಸಿಟಿ ಇಲ್ಲ ,ಅವರೇನು ದೇಶದ್ರೋಹಿ ಕೆಲಸ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಎಸ್ಎಸ್ ಏನ್ ಕೆಲಸ ಮಾಡುತ್ತೆ, ಪಿಎಫ್ಐ ಏನ್ ಕೆಲಸ ಮಾಡುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆರ್ ಎಸ್ಎಸ್ ದೇಶಭಕ್ತಿ ಕೆಲಸ ಮಾಡುತ್ತೆ. ಪಿಎಫ್ಐ (PFI) ದೇಶದ್ರೋಹಿ ಕೆಲಸ ಮಾಡುತ್ತೆ. ಆರ್ ಎಸ್ಎಸ್ ಬ್ಯಾನ್ ಮಾಡುವ ಪ್ರಮೇಯವೇ ಇಲ್ಲ. ಪಿಎಫ್ಐ ಬ್ಯಾನ್ ಮಾಡಲು ಎಲ್ಲಾ ಕಡೆಯಿಂದ ಒತ್ತಾಯವಿತ್ತು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.
BIGG NEWS : ಫ್ಲೆಕ್ಸ್ ಹಾಕೋರು ಅನುಮತಿ ಪಡೆದು ಹಾಕಬೇಕು : ಸಿಎಂ ಬೊಮ್ಮಾಯಿ ಸ್ಪಷ್ಟನೆ | CM Basavaraj Bommai