ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆ ನೀಡಿದ್ದರ ಬಗ್ಗೆ ಬಿಗ್ ಅಪ್ ಡೇಟ್ ನಿಮ್ಮ ಕನ್ನಡ ನ್ಯೂಸ್ ನೌ ನೀಡಲಾಗಿತ್ತು. ಈಗ ಸೋಷಿಯಲ್ ಮೀಡಿಯಾದಲ್ಲಿ ಮೇ.8ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ ಎನ್ನೋ ವೈರಲ್ ಪೋಟೋ ಬಗ್ಗೆ ಸತ್ಯಾಸತ್ಯತೆ ನಿಮಗೆ ತಿಳಿಸಲಿದೆ ಆ ಬಗ್ಗೆ ಮುಂದೆ ಓದಿ.
ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಎಸ್ ಎಸ್ ಎಲ್ ಸಿ ಪರೀಕ್ಷೆ ಯಾವಾಗ ಪ್ರಕಟವಾಗಲಿದೆ ಎಂಬುದಾಗಿ ನಿಮ್ಮ ಕನ್ನಡ ನ್ಯೂಸ್ ನೌ ಎಡಿಟರ್ ವಸಂತ ಬಿ ಈಶ್ವರಗೆರೆ ಮಾಹಿತಿ ಕೋರಿದ್ದರು. ಆಗ ನಿರ್ದೇಶಕರು ಕೆಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ನಡೆಯುತ್ತಿದೆ. ಅವುಗಳು ಮುಗಿದ ನಂತ್ರ ಶೀಘ್ರವೇ ಎಸ್ ಎಸ್ ಎಲ್ ಸಿ ಪರೀಕ್ಷೆ ಘೋಷಣೆ ದಿನಾಂಕ ಪ್ರಕಟಿಸೋದಾಗಿ ಸ್ಪಷ್ಟ ಪಡಿಸಿದ್ದರು. ಅಂದೇ BIG NEWS: ‘SSLC ಪರೀಕ್ಷೆ ಫಲಿತಾಂಶ’ದ ಬಗ್ಗೆ ‘ಶಾಲಾ ಶಿಕ್ಷಣ ಇಲಾಖೆ’ಯಿಂದ ಬಿಗ್ ಅಪ್ ಡೇಟ್ | SSLC Exam Results ನಿಮ್ಮ ಕನ್ನಡ ನ್ಯೂಸ್ ನೌ ನಲ್ಲಿ ಆ ಸುದ್ದಿಯನ್ನು ಪ್ರಕಟಿಸಲಾಗಿತ್ತು.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಟೋವೊಂದು ವೈರಲ್ ಆಗಿದೆ. ಅದರಲ್ಲಿ ಕರ್ನಾಟಕ SSLC ಫಲಿತಾಂಶ 2024 ಎಂಬುದಾಗಿ ತಲೆಬರಹದಲ್ಲಿ ವೈರಲ್ ಆಗಿದೆ. ವೈರಲ್ ಆಗಿರೋ ಪೋಟೋದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ದಿನಾಂಕ 08-05-2024ರಂದು ಪ್ರಕಟವಾಗಲಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 08-05-2024ರಂದು ಬೆಳಿಗ್ಗೆ 10 ಗಂಟೆಗೆ ಪ್ರಕಟವಾಗಲಿದೆ. ಮರು ಮೌಲ್ಯ ಮಾಪನ, ಮರು ಪರಿಶಈಲನೆಗಾಗಿ ಶಾಲಾ ಶಿಕ್ಷಣ ಇಲಾಖೆ ಜೂನ್ 2024ರವರೆಗೆ ಅವಕಾಶ ನೀಡಿದೆ ಎಂಬುದಾಗಿ ತಿಳಿಸಲಾಗಿತ್ತು.
ಇದು ಫೇಕ್ ಫೇಕ್ ಫೇಕ್
ಹೌದು ವಿದ್ಯಾರ್ಥಿಗಳೇ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಪೋಟೋ ಫೇಕ್ ಆಗಿದೆ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯು ಮಾಹಿತಿ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ಪೋಟೋ ಫೇಕ್ ಆಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸೋ ಬಗ್ಗೆ ಅಧಿಕೃತ ಮಾಹಿತಿ ಇದು ಅಲ್ಲ. ಆ ಬಗ್ಗೆ ಶೀಘ್ರವೇ ದಿನಾಂಕ ಪ್ರಕಟಿಸೋದಾಗಿ ಸ್ಪಷ್ಟ ಪಡಿಸಿದೆ. ಸೋ ನೀವು ಶಾಲಾ ಶಿಕ್ಷಣ ಇಲಾಖೆಯಿಂದ ಅಧಿಕೃತವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಘೋಷಣೆಯ ದಿನಾಂಕವನ್ನು ಪ್ರಕಟಿಸೋವರೆಗೆ ಕಾಯಬೇಕಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಪೋಟೋ ಬಗ್ಗೆ ಗಮನವಹಿಸಬೇಡಿ ಎಂಬುದಾಗಿ ಶಾಲಾ ಶಿಕ್ಷಣ ಇಲಾಖೆ ಮನವಿ ಮಾಡಿದೆ.
BIG NEWS: ಪ್ರಜ್ವಲ್ ರೇವಣ್ಣ ‘2800 ಯುವತಿ, ಮಹಿಳೆ’ಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ: ‘ನಲವಾಡ್’ ಗಂಭೀರ ಆರೋಪ
BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ಏಕರೂಪದ ದರ : ಕೇಂದ್ರ ಸರ್ಕಾರದಿಂದ ಮಾಹಿತಿ ಕೇಳಿದ ಸುಪ್ರೀಂಕೋರ್ಟ್