ಬೆಂಗಳೂರು: ಇಂದು ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ-1ರ ವಿಜ್ಞಾನ ವಿಷಯದ ಪರೀಕ್ಷೆ ರಾಜ್ಯಾಧ್ಯಂತ ಯಶಸ್ವಿಯಾಗಿ ನಡೆಯಿತು. ಇಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ( SSLC Exam ) 8.41 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಅಲ್ಲದೇ ನಕಲಿಗೆ ಯತ್ನಿಸಿದಂತ ಓರ್ವ ವಿದ್ಯಾರ್ಥಿ ಡಿಬಾರ್ ಮಾಡಲಾಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಿದ್ದು ಬೆಂಗಳೂರು ಉತ್ತರದಿಂದ 47498, ಬೆಂಗಳೂರು ದಕ್ಷಿಣದಿಂದ 60548, ರಾಮನಗರ ಜಿಲ್ಲೆಯಲ್ಲಿ 12899, ಬೆಂಗಳೂರು ಗ್ರಾಮಾಂತರದಲ್ಲಿ 14162, ಚಿಕ್ಕಬಳ್ಳಾಪುರ 15675 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರೋದಾಗಿ ತಿಳಿಸಿದೆ.
ಇಂದಿನ ವಿಜ್ಞಾನ ವಿಷಯದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 8,56,750 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 8,41,439 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಬಾಗಲಕೋಟೆಯ ಬಿಳಗಿಯಲ್ಲಿನ ಆದರ್ಶ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ನಕಲಿಗೆ ಯತ್ನಿಸಿದಂತ ಓರ್ವ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಒಟ್ಟಾರೆಯಾಗಿ 8,56,750 ಮಂದಿಯಲ್ಲಿ 8,41,439 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 15,311 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಶೇಕಡವಾರು ಹಾಜರಾತಿ ಪ್ರಮಾಣ ಶೇ.98.2ರಷ್ಟು ಆಗಿದೆ ಎಂದು ತಿಳಿಸಿದೆ.
‘ಸಿಎಂ ಆಪರೇಷನ್ ಹಸ್ತ’ ಸಕ್ಸಸ್: ‘ಶ್ರೀನಿವಾಸ್ ಪ್ರಸಾದ್’ ಅಳಿಯ ಧೀರಜ್ BJP ತೊರೆದು ‘ಕಾಂಗ್ರೆಸ್ ಸೇರ್ಪಡೆ’
BREAKING : ಡಿಸಿಎಂ ಡಿಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ : ‘IT’ ಇಲಾಖೆಯಿಂದ ನೋಟಿಸ್ ಜಾರಿ