ಬೆಂಗಳೂರು: ಇಂದು ರಾಜ್ಯಾಧ್ಯಂತ ಎರಡನೇ ದಿನದ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. 8.27 ಲಕ್ಷ ವಿದ್ಯಾರ್ಥಿಗಳು ಇಂದು ನಡೆದಂತ ಸಮಾಜ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದಾರೆ. ಅಲ್ಲದೇ ಪರೀಕ್ಷೆಯಲ್ಲಿ ನಕಲಿಗೆ ಯತ್ನಿಸಿದಂತ 9 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ದಿನಾಂಕ 27-03-2024ರಂದು ಸೋಷಿಯಲ್ ಸೈನ್ಸ್ ವಿಷಯದ ಪರೀಕ್ಷೆ ನಡೆಯಿತು. ನೋಂದಾಯಿಸಿಕೊಂಡಿದ್ದಂತ 8,41,120 ವಿದ್ಯಾರ್ಥಿಗಳಲ್ಲಿ, 8,27,773 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು ಎಂದು ತಿಳಿಸಿದೆ.
ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿದ ಕಾರಣ ಬೆಂಗಳೂರು ಉತ್ತರ ವಿಭಾಗದಲ್ಲಿ ಓರ್ವ, ಧಾರವಾಡದಲ್ಲಿ ನಾಲ್ವರು, ಯಾದಗಿರಿಯಲ್ಲಿ ಓರ್ವ ಹಾಗೂ ರಾಯಚೂರು ಜಿಲ್ಲೆಯಲ್ಲಿ ಮೂವರು ಸೇರಿದಂತೆ 9 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ಇಂದಿನ ಎಸ್ ಎಸ್ ಎಲ್ ಸಿಯ ಸಮಾಜ ವಿಜ್ಞಾನ ಪರೀಕ್ಷೆಗೆ 13,347 ವಿದ್ಯಾರ್ಥಿಗಳು ಗೈರಾಗಿದ್ದಾರೆ. 98.4ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರೋದಾಗಿ ಅಂಕಿ ಅಂಶವನ್ನು ನೀಡಿದೆ.
ನಾಳೆ ‘ಲೋಕಸಭಾ ಚುನಾವಣೆ’ಗೆ ಅಧಿಸೂಚನೆ ಪ್ರಕಟ: ಅಭ್ಯರ್ಥಿಗಳಿಂದ ‘ನಾಮಪತ್ರ ಸಲ್ಲಿಕೆ’ ಆರಂಭ
BREAKING: ‘ಯತ್ನಾಳ್’ ವಿರುದ್ಧ ‘ಡಿಕೆಶಿ ಮಾನನಷ್ಟ’ ಕೇಸ್: ಅರ್ಜಿ ವರ್ಗಾವಣೆಗೆ ‘ಹೈಕೋರ್ಟ್ ನಕಾರ’