ರಾಯಚೂರು : ಯಾವೊಬ್ಬ ಗಂಡಸೂ ಮೀಸಲಾತಿ ಹೆಚ್ಚಿಸಲು ಮುಂದಾಗಿಲ್ಲ. ಆದರೆ ಬೊಮ್ಮಾಯಿ ಮೀಸಲಾತಿ ಹೆಚ್ಚಿಸಿ ಅವರು ಏನೆಂದು ತೋರಿಸಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ರಾಯಚೂರು (Raichur) ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಚಿವರು ‘ಬಿ.ಎಸ್ ಯಡಿಯೂರಪ್ಪ ವಾಲ್ಮೀಕಿ ಸಮುದಾಯಕ್ಕೆ ಸಾಕಷ್ಟು ನೆರವು ನೀಡಿದ್ದಾರೆ. ಯಡಿಯೂರಪ್ಪ ಅವರು ವಾಲ್ಮೀಕಿ ಮಹಿರ್ಷಿ ಜಯಂತಿ ಜಾರಿ ಮಾಡಿದ್ದಾರೆ. ಮೋದಿ-ಅಮೀತ್ ಶಾ ಜೋಡಿಯಂತೆ ನಮ್ಮಲ್ಲಿ ಬಿಎಸ್ ವೈ-ಬೊಮ್ಮಾಯಿ ಜೋಡಿಯಿದೆ. ಭೀಷ್ಮನ ಸ್ಥಾನದಲ್ಲಿ ಬಿಎಸ್ವೈ ಇದ್ದಾರೆ. 40 ವರ್ಷದಗಳಿಂದ ಹೋರಾಟ ಮಾಡಿದ್ದಾರೆ. ಎರಡು ಸ್ಥಾನದಿಂದ ಈಗ, ಬಿಜೆಪಿ ಅಧಿಕಾರ ವರೆಗೆ ಬಂದಿರುವುದಕ್ಕೆ ಬಿಎಸ್ ಯಡಿಯೂರಪ್ಪ ಕಾರಣ ಎಂದರು.
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಲು ಯಾರಿಗೂ ಆಗಲಿಲ್ಲ. ಯಾವೊಬ್ಬ ಗಂಡಸೂ ಮೀಸಲಾತಿ ಹೆಚ್ಚಿಸಲು ಮುಂದಾಗಿಲ್ಲ. ಆದರೆ ಬೊಮ್ಮಾಯಿ ಮೀಸಲಾತಿ ಹೆಚ್ಚಿಸಿ ತಾನೆಂಬುದು ತೋರಿಸಿದ್ದಾರೆ ಎಂದು ಹೇಳಿದ್ದಾರೆ.
BIGG NEW : ದಾವೂದ್ ಇಬ್ರಾಹಿಂ ಗ್ಯಾಂಗ್ ಜೊತೆ ನಂಟು ಹೊಂದಿದ್ದ ಐವರನ್ನು ಬಂಧಿಸಿದ ಮುಂಬೈ ಪೊಲೀಸ್ | Dawood Ibrahim