ಬೆಂಗಳೂರು : ದೀಪಾವಳಿ ಹಬ್ಬಕ್ಕಾಗಿ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಗಳು ಪ್ರಯಾಣ ದರ ಹೆಚ್ಚಿಸಿ ದುಪ್ಪಟ್ಟು ಹಣ ವಸೂಲಿ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಖಡಕ್ ಎಚ್ಚರಿಕೆ ನೀಡಿದ್ದರೂ, ಖಾಸಗಿ ಬಸ್ ಗಳ ಮಾಲೀಕರು ದುಪಟ್ಟು ದರ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮತ್ತೆ ಬಸ್ ಪ್ರಯಾಣ ದರ ಮನಸ್ಸಿಗೆ ಬಂದ ಹಾಗೆ ಹೆಚ್ಚಳ ಮಾಡುವ ಸಾಧ್ಯತೆ ಇರುವುದರಿಂದ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದು, ಒಂದು ವೇಳೆ ಮುಂದುವರೆದರೆ ಖಾಸಗಿ ಬಸ್ಸುಗಳ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದವರು ಈ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತದೆ. ಅಲ್ಲದೇ ಚೆಕ್ ಪೋಸ್ಟ್ ಗಳನ್ನು ಹೆಚ್ಚಿಸಿ ಬಸ್ಸುಗಳ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಬೆಂಗಳೂರಿನಿಂದ ವಿವಿಧ ಊರುಗಳಿಗೆ ಹೋಗುವ ಪ್ರಯಾಣಿಕರಿಂದ ಖಾಸಗಿ ಬಸ್ ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತೀವೆ. ಬೆಂಗಳೂರು–ಬಳ್ಳಾರಿ ಬಸ್ ಟಿಕೆಟ್ ದರ ಪರಿಶೀಲಿಸಿದಾಗ ಖಾಸಗಿ ಬಸ್ ಟಿಕೆಟ್ ದರ 1000 ರೂ-1500 ರೂ.ವರೆಗೆ ನಿಗದಿ ಮಾಡಿವೆ. ಅಕ್ಟೋಬರ್ 21 ರಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಟ್ರಾವೆಲ್ಸ್ ಒಂದರ ಬಸ್ ನ ಟಿಕೆಟ್ ದರ 5,000 ರೂ. ದರ ನಿಗದಿಪಡಿಸಲಾಗಿದೆ. ಸಚಿವರ ಎಚ್ಚರಿಕೆ ನೀಡಿದ್ದರೂ ಖಾಸಗಿ ಬಸ್ಗಳ ಮಾಲೀಕರು ಕ್ಯಾರೆ ಎನ್ನದೆ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ.
ಇನ್ನೇನು ದೀಪಾವಳಿ ಹಬ್ಬ ಹತ್ರ ಬರುತ್ತಿದೆ. ಹೀಗಾಗಿ ನಗರದಲ್ಲಿ ಇದ್ದ ಜನರು ಊರಿಗಳಿಗೆ ಹೋಗುವ ಪ್ಲಾನ್ ಮಾಡುತ್ತಿರುತ್ತಾರೆ. ಹೀಗಿರುವಾಗ ಸಾಮಾನ್ಯವಾಗಿ ಹಬ್ಬದಿನಗಳಲ್ಲಿ ಬಸ್ ದರ ಹೆಚ್ಚಳವಾಗುತ್ತದೆ. ಆದರೆ ಈ ಬಾರಿ ಹಬ್ಬದ ದಿನದಲ್ಲಿ ಸರ್ಕಾರಿ ಬಸ್ ಗಳು ಸೇರಿ ಯಾವುದೇ ಬಸ್ ಗಳ ಪ್ರಯಾಣ ದರ ಹೆಚ್ಚಿಸದಂತೆ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
‘ಎಐಸಿಸಿ’ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಿಂದ ಭಾರತಕ್ಕೆ ಶಕ್ತಿ : ಡಿ.ಕೆ ಶಿವಕುಮಾರ್