ಬೆಂಗಳೂರು : ಕೆ ಎಸ್ ಆರ್ ಟಿ ಸಿ ನೌಕರರಿಗೆ ಆರನೇ ವೇತನ ಆಯೋಗ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಜೊತೆ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ನಾಲ್ಕರಿಂದ ಐದು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಆಗಬೇಕು, ಆದರೆ ಬೇರೆ ಬೇರೆ ಕಾರಣಗಳಿಂದ ಇದು ಸಾಧ್ಯವಾಗಿಲ್ಲ, ಆದ್ದರಿಂದ ಸಿಎಂ ಬೊಮ್ಮಾಯಿ ಜೊತೆ ಚರ್ಚಿಸಿ ಶೀಘ್ರದಲ್ಲೇ ಸಿಹಿಸುದ್ದಿ ನೀಡುವುದಾಗಿ ಹೇಳಿದ್ದಾರೆ.
ಕೆ ಎಸ್ ಆರ್ ಟಿ ಸಿ ನೌಕರರಿಗೆ ಪ್ರತಿ ತಿಂಗಳ ಒಂದನೇ ತಾರೀಖಿನಂದೇ ವೇತನ ನೀಡುವ ಬಗ್ಗೆ ಮಹತ್ವದ ತೀರ್ಮಾನಕ್ಕೆ ನಿರ್ಧರಿಸಿದ್ದ ಸರ್ಕಾರ ಇದೀ್ಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ಓಲಾ ಊಬರ್ ಜೊತೆ ಸಾರಿಗೆ ಇಲಾಖೆ ಸಭೆ
ಓಲಾ , ಉಬರ್ ಜೊತೆಗಿನ ಸಭೆ ಇದೀಗ ಅಂತ್ಯಗೊಂಡಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಇಲಾಖೆ ಆಯುಕ್ತ ಟಿಹೆಚ್ಎಂ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಎಂಎಸ್ ಬಿಲ್ಡಿಂಗ್ ನಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ 2 ಕಿ.ಮೀ.ಗೆ ಆಟೋ ದರ 100 ರೂ. ನಿಗದಿ ಮಾಡಲು ಮನವಿ ಮಾಡಲಾಗಿದೆ.
ಇದಕ್ಕೆ 30% ರಷ್ಟು ದರ ಹೆಚ್ಚಳ ಮಾಡಬೇಕು ಎಂದು ಕಂಪನಿಗಳು ಪಟ್ಟು ಹಿಡಿದಿವೆ. ಆದರೆ ಇದಕ್ಕೆ ಸಾರಿಗೆ ಅಧಿಕಾರಿಗಳು ನಮಗೆ ಈ ಬಗ್ಗೆ ಯಾವುದೇ ಮನವಿ ಬಂದಿಲ್ಲ ಎಂದಿದ್ದಾರೆ. ದರ ಹೆಚ್ಚಳ ಬಗ್ಗೆ ನಾವು ಈಗಾಗಲೇ ಹೆಚ್ಚುವರಿ ಆಯುಕ್ತ ಹೇಮಂತ್ ಕುಮಾರ್ ಅವರಿಗೆ ಮೇಲ್ ನಲ್ಲಿ ಮನವಿ ಮಾಡಿದ್ದೀವಿ ಎಂದು ಕಂಪನಿಗಳು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು RTO ಕಮೀಷನರ್ ಟಿಎಚ್ಎಂ ಕುಮಾರ್ ಹೇಳಿದ್ದಾರೆ. ಸಭೆಯಲ್ಲಿ ಸಾರಿಗೆ ಇಲಾಖೆಯಿಂದ ಕಂಪನಿಗಳ ದರ ಹೆಚ್ಚಳ ಮನವಿಗೆ ಒಪ್ಪಿಗೆ ಸೂಚಿಸಲಿಲ್ಲ. ಈ ಸಭೆಯ ಬಗ್ಗೆ ಹೈ ಕೋರ್ಟ್ ಗೆ ಮಾಹಿತಿ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ನವೆಂಬರ್- 7 ರಂದು ಹೈ ಕೋರ್ಟ್ ನಲ್ಲಿ ದರಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಯಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ಗೂಳಿ ಡಿಕ್ಕಿ, ಒಂದೇ ತಿಂಗಳಿನಲ್ಲಿ ಮೂರನೇ ಘಟನೆ
‘ಅಪ್ಪು ಪುಣ್ಯತಿಥಿ’ : ಕನ್ನಡದಲ್ಲೇ ಟ್ವೀಟ್ ಮಾಡಿ ಸ್ಮರಿಸಿದ ಅರವಿಂದ್ ಕೇಜ್ರಿವಾಲ್