ಯಾದಗಿರಿ : ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಸಚಿವ ಶ್ರೀರಾಮುಲು ಅಚ್ಚರಿ ಹೇಳಿಕೆ ನೀಡಿದ್ದು, ನಾನು ರಾಜಕಾರಣದಲ್ಲಿ ಮುಂದೆ ಇರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಹುಣಸಗಿಯಲ್ಲಿ ನಡೆದ ಬಿಜೆಪಿ (BJP) ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು ನಾನು ರಾಜಕಾರಣದಲ್ಲಿ ಮುಂದೆ ಇರುತ್ತೇನೋ ಇಲ್ಲವೋ ಗೊತ್ತಿಲ್ಲ, ನಮ್ಮ ಸಮುದಾಯವನ್ನು ಮುನ್ನಡೆಸುವ ಶಕ್ತಿ ರಾಜೂ ಗೌಡರಿಗೆ ಇದೆ. ಹೀಗಾಗಿ ರಾಜೂ ಗೌಡರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಸಚಿವ ಶ್ರೀರಾಮುಲು ಭಾವುಕರಾಗಿ ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಸಂಪೂರ್ಣ ಕಿತ್ತೊಗೆಯಬೇಕು, ಬೊಮ್ಮಾಯಿಯವರನ್ನು ಮತ್ತೆ ಸಿಎಂ ಮಾಡಬೇಕು. ಬಹಳ ಮಂದಿ ಸಿಎಂ ಆಗಬೇಕು ಅಂತ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಈ ಭಾಗದ ಜನರ ಅಭಿವೃದ್ದಿಗಾಗಿ 3 ಸಾವಿರ ಕೋಟಿ ರೂ. ಅನುದಾನ ಕೊಡುವ ಕೆಲಸ ಸಿಎಂ ಮಾಡಿದ್ದಾರೆ. ಮುಂದಿನ ಬಜೆಟ್ನಲ್ಲಿ 5 ಸಾವಿರ ಕೋಟಿ ರೂ. ಕೊಡಲು ಸಿದ್ಧರಿದ್ದಾರೆ ಎಂದರು. ಹಿಂದೆ ಬೊಮ್ಮಾಯಿ ತಂದೆಯವರು ಸಿಎಂ ಆಗಿದ್ದರು. ಅವರು ಹಿಂದುಳಿದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದರು. ಈಗ ಬಸವರಾಜ ಬೊಮ್ಮಾಯಿ ಆ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದರು.
WATCH VIDEO : ಕುರ್ಚಿ ಮೇಲೆ ಕುಂತಲ್ಲೇ ಹಾರಿ ಹೋಯ್ತು ಜಿಮ್ ಟ್ರೈನರ್ ಪ್ರಾಣ ಪಕ್ಷಿ… ಸಿಸಿಟಿವಿಯಲ್ಲಿ ದೃಶ್ಯ ಸೆರೆ