ಮೈಸೂರು : ನಾಳೆ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು ಇಡೀ ದೇಶದ ಜನರೇ ಅತ್ಯಂತ ಕುತೂಹಲದಿಂದ ಈ ಒಂದು ಭವ್ಯವಾದ ಕಾರ್ಯಕ್ರಮ ನೋಡಲು ಕಾತುರದಿಂದ ಕಾಯುತ್ತಿದ್ದಾರೆ ಅದೇ ರೀತಿಯಾಗಿ ಮೈಸೂರಲ್ಲಿ ಇದರ ಪ್ರಯುಕ್ತ ಶ್ರೀ ರಾಮೋತ್ಸವಕ್ಕೆ ಸಿದ್ಧತೆ ಮಾಡಿ ಕೊಳ್ಳಲಾಗಿತ್ತು ಆದರೆ ಇದಕ್ಕೆ ಇದೀಗ ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನಲ್ಲಿ ಶ್ರೀ ರಾಮೋತ್ಸವ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದ್ದು, ಗಣಪತಿ ಸಚ್ಚಿದಾನಂದ ಆಶ್ರಮದ ಮೆರವಣಿಗೆಗೆ ಅನುಮತಿಯನ್ನು ನಿರಾಕರಿಸಲಾಗಿದೆ.ಕೆಸರೆಯಿಂದ ಆಶ್ರಮದವರೆಗೂ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೊದಲು ಅನುಮತಿಯನ್ನು ಪೋಲೀಸ ಅಧಿಕಾರಿಗಳು ನೀಡಿದ್ದರು ಇದೀಗ ಏಕಾಏಕಿ ಮೆರವಣಿಗೆಗೆ ಅನುಮತಿಯನ್ನು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅರ್ಜಿ ವಜಾ
ನಾಳೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಡೀ ದೇಶದಾದ್ಯಂತ ಸಂಭ್ರಮದ ಮನೆ ಮಾಡಿದ್ದು, ಇದರ ಅಂಗವಾಗಿ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆ ಶೋಭಾಯಾತ್ರೆ ನಡೆಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿದೆ ಎಂದು ತಿಳಿದುಬಂದಿದೆ.
ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆಯಿಂದ ನಾಳೆ ಮದ್ಯಾಹ್ನ 1 ಗಂಟೆಗೆ ಶೋಭಾಯಾತ್ರೆ ಆಯೋಜಿಸಿತ್ತು. ಯಾತ್ರೆಗೆ ಅನುಮತಿ ನೀಡಲು ಪೊಲೀಸರು ಈ ವೇಳೆ ನಿರಾಕರಿಸಿದ್ದರು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರು ಸಂಘಟನೆ ಕೋರಿದ ಅನುಮತಿ ಮನವಿಯನ್ನು ತಿರಸ್ಕರಿಸಿದ್ದರು ಎಂದು ತಿಳಿದಿಬಂದಿದೆ.
ಆದರೆ ಇದೀಗ ಶೋಭಯಾತ್ರೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಧಾರವಾಡ ಹೈಕೋರ್ಟ್ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆಯಿಂದ ಶೋಭಾಯಾತ್ರೆ ಆಯೋಜಿಸಿತ್ತು. ನಾಳೆ ಮಧ್ಯಾಹ್ನ 1ಗಂಟೆಗೆ ಈ ಒಂದು ಸಂಘಟನೆಯಿಂದ ಬೃಹತ್ ಶೋಭಾಯಾತ್ರೆ ಆಯೋಜನೆ ಮಾಡಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.