ಕೊಲಂಬೊ (ಶ್ರೀಲಂಕಾ): ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ದ್ವೀಪ ರಾಷ್ಟ್ರದಲ್ಲಿ ಇಂದು ಅಧ್ಯಕ್ಷೀಯ ಚುನಾವಣೆ(Presidential election) ನಡೆಯಲಿದೆ. ಕಳೆದ ವಾರ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಗೋಟಬಯಾ ರಾಜಪಕ್ಸ ದೇಶದಿಂದ ಪಲಾಯನ ಮಾಡಿದ ನಂತ್ರ ರಾಜೀನಾಮೆ ನೀಡಿದ್ದರು. ಹೀಗಾಗಿ, ಇಂದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಚುನಾವಣೆಗೆ ಮೂವರು ಅಭ್ಯರ್ಥಿಗಳು ಹಣಾಹಣಿ ನಡೆಸುತ್ತಿದ್ದಾರೆ. ಅವರಲ್ಲಿ ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಕೂಡ ಒಬ್ಬರಾಗಿದ್ದಾರೆ. ಇತರ ಇಬ್ಬರು ಅಭ್ಯರ್ಥಿಗಳಾದ ಎಸ್ಎಲ್ಪಿಪಿ ಸಂಸದ ಡಲ್ಲಾಸ್ ಅಲಹಪೆರುಮ ಮತ್ತು ನ್ಯಾಷನಲ್ ಪೀಪಲ್ಸ್ ಪವರ್ (ಎನ್ಪಿಪಿ) ನಾಯಕ ಅನುರ ಕುಮಾರ ಡಿಸಾನಾಯಕೆ ಕಣದಲ್ಲಿದ್ದಾರೆ.
ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ನಿನ್ನೆ ದ್ವೀಪ ರಾಷ್ಟ್ರದ ಅಧ್ಯಕ್ಷರ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಮತ್ತು ಉನ್ನತ ಹುದ್ದೆಗೆ ಪ್ರತಿಸ್ಪರ್ಧಿ ಅಭ್ಯರ್ಥಿ ಡಲ್ಲಾಸ್ ಅಲಹಪ್ಪೆರುಮಾ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಮುಂಬರುವ ಅಧ್ಯಕ್ಷೀಯ ಚುನಾವಣೆಗೆ ಕಣದಲ್ಲಿರುವ ಶ್ರೀಲಂಕಾ ಪೊದುಜನ ಪೆರಮುನಾ (ಎಸ್ಎಲ್ಪಿಪಿ) ಸಂಸದ ಅಲಹಪ್ಪೆರುಮಾ ಅವರನ್ನು ಸಮಗಿ ಜನ ಬಲವೇಗಯ ಮತ್ತು ಅದರ ಮೈತ್ರಿ ಮತ್ತು ವಿರೋಧ ಪಕ್ಷದ ಪಾಲುದಾರರು ಬೆಂಬಲಿಸುತ್ತಾರೆ ಎಂದು ಪ್ರೇಮದಾಸ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಲಂಕನ್ನರಿಗೆ ಹೆಚ್ಚಿನ ಒಳಿತನ್ನು ಬಯಸಿ ಈ ನಿರ್ಧಾರಕ್ಕೆ ಬರುತ್ತಿದ್ದೇನೆ ಎಂದು ಪ್ರೇಮದಾಸ ಹೇಳಿದ್ದಾರೆ. “ನಾನು ಪ್ರೀತಿಸುವ ನನ್ನ ದೇಶ ಮತ್ತು ನಾನು ಪ್ರೀತಿಸುವ ಜನರ ಹೆಚ್ಚಿನ ಒಳಿತಿಗಾಗಿ ನಾನು ಈ ಮೂಲಕ ಅಧ್ಯಕ್ಷ ಸ್ಥಾನಕ್ಕೆ ನನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುತ್ತೇನೆ. ಸಾಮಗಿ ಜನ ಬಲವೇಗ ಮತ್ತು ನಮ್ಮ ಮೈತ್ರಿ ಮತ್ತು ನಮ್ಮ ವಿರೋಧ ಪಕ್ಷದ ಪಾಲುದಾರರು ಡಲ್ಲಾಸ್ ಅಲಹಪೆರುಮಾ ಅವರನ್ನು ಗೆಲ್ಲಿಸಲು ಶ್ರಮಿಸುತ್ತಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ರನಿಲ್ ವಿಕ್ರಮಸಿಂಘೆ ಅವರು ಆರು ಬಾರಿ ಮಾಜಿ ಪ್ರಧಾನಿಯಾಗಿದ್ದು, ಗೋಟಬಯಾ ರಾಜೀನಾಮೆ ನೀಡಿದ ನಂತರ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾದರು. ಆದರೆ, ಅವರು ರಾಜಪಕ್ಸ ಮಿತ್ರ ಎಂದು ನೋಡುವ ಪ್ರತಿಭಟನಾಕಾರರಿಂದ ತಿರಸ್ಕಾರಕ್ಕೊಳಗಾಗಿದ್ದಾರೆ.
Earthquake: ಇಂಡೋನೇಷ್ಯಾದ ಬೆಂಗ್ಕುಲುದಲ್ಲಿ ಭೂಕಂಪ: 5.4 ತೀವ್ರತೆ ದಾಖಲು