ಬಿಹಾರ : ಬೋಧ್ ಗಯಾದಲ್ಲಿ ದಲೈ ಲಾಮಾ ಪ್ರಯಾಣಿಸುವಾಗ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಭದ್ರತಾ ಏಜೆನ್ಸಿಗಳು ಚೀನಾದ ಮಹಿಳೆಯ ಸ್ಕೆಚ್ ಬಿಡುಗಡೆ ಮಾಡುವ ಮೂಲಕ ಭಾರೀ ಹುಡುಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಡಿಯಿಂದ ಬೆಂಗಳೂರು ನೀರು ಶುದ್ಧೀಕರಣ ಘಟಕಗಳು, ಬೋರ್ ವೆಲ್ ಅಕ್ರಮ ಸಂಬಂಧ ಬಿಬಿಎಂಪಿಗೆ ನೋಟಿಸ್
ಗಯಾ ಪೊಲೀಸ್ ಅಧೀಕ್ಷಕರು, “ಚೀನಾದ ಮಹಿಳೆಯೊಬ್ಬರು ಗಯಾದಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಕಳೆದ 2 ವರ್ಷಗಳಿಂದ ನಾವು ಒಳಹರಿವುಗಳನ್ನು ಪಡೆಯುತ್ತಿದ್ದೆವು. ಶೋಧ ಕಾರ್ಯ ನಡೆಯುತ್ತಿದೆ.
ಇಡಿಯಿಂದ ಬೆಂಗಳೂರು ನೀರು ಶುದ್ಧೀಕರಣ ಘಟಕಗಳು, ಬೋರ್ ವೆಲ್ ಅಕ್ರಮ ಸಂಬಂಧ ಬಿಬಿಎಂಪಿಗೆ ನೋಟಿಸ್
ಪ್ರಸ್ತುತ, ಚೀನಾದ ಮಹಿಳೆಯನ್ನು ಪತ್ತೆಹಚ್ಚಲಾಗಿಲ್ಲ, ಇದರಿಂದಾಗಿ ಅನೇಕ ಅನುಮಾನಾಸ್ಪದ ಅಂಶಗಳನ್ನು ಎತ್ತಲಾಗುತ್ತಿದೆ. ಚೀನಾದ ಗೂಢಚಾರನೆಂಬ ಅನುಮಾನವನ್ನು ತಳ್ಳಿಹಾಕುವಂತಿಲ್ಲ.
ಇಡಿಯಿಂದ ಬೆಂಗಳೂರು ನೀರು ಶುದ್ಧೀಕರಣ ಘಟಕಗಳು, ಬೋರ್ ವೆಲ್ ಅಕ್ರಮ ಸಂಬಂಧ ಬಿಬಿಎಂಪಿಗೆ ನೋಟಿಸ್
ಜೀವ ಬೆದರಿಕೆ ಹಿನ್ನೆಲೆ ಬಿಹಾರದ ಗಯಾದಲ್ಲಿ ಆಶ್ರಯ ಪಡೆದಿರುವ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ಚಲನವಲನಗಳ ಮೇಲೆ ಕಣ್ಣಿಡಲು ಚೀನಾ ಮಹಿಳೆಯೊಬ್ಬಳನ್ನು ಗೂಢಾಚಾರಿಕೆಗೆ ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ.
ಇಡಿಯಿಂದ ಬೆಂಗಳೂರು ನೀರು ಶುದ್ಧೀಕರಣ ಘಟಕಗಳು, ಬೋರ್ ವೆಲ್ ಅಕ್ರಮ ಸಂಬಂಧ ಬಿಬಿಎಂಪಿಗೆ ನೋಟಿಸ್
ದಲೈಲಾಮಾ ಅವರಿಗೆ ಸರ್ಕಾರ ಬಿಗಿ ಭದ್ರತೆ ನೀಡಿದೆ. ಗೂಢಾಚಾರಿಕೆಯ ಶಂಕೆಯ ಮೇಲೆ ಚೀನಿ ಮಹಿಳೆಯ ಪತ್ತೆಗಾಗಿ ಕೇಂದ್ರ ಭದ್ರತಾ ಮತ್ತು ಗುಪ್ತಚರ ದಳ ಪತ್ತೆ ಕಾರ್ಯ ಆರಂಭಿಸಿದೆ. ಚೀನಾದ ಮಹಿಳೆ ದೇಶದ ವಿವಿಧ ಭಾಗಗಳಲ್ಲಿ ತಲೆಮರೆಸಿಕೊಂಡುಸಂಚರಿಸುತ್ತಿದ್ದಾಳೆ.
ಇಡಿಯಿಂದ ಬೆಂಗಳೂರು ನೀರು ಶುದ್ಧೀಕರಣ ಘಟಕಗಳು, ಬೋರ್ ವೆಲ್ ಅಕ್ರಮ ಸಂಬಂಧ ಬಿಬಿಎಂಪಿಗೆ ನೋಟಿಸ್
ಬಿಹಾರದ ಗಯಾವನ್ನು ತಲುಪಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಶಂಕಿತ ಗೂಢಾಚಾರಿಣಿಯ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಆಕೆ 2 ವರ್ಷಗಳಿಂದ ದೇಶದಲ್ಲಿ ವಾಸಿಸುತ್ತಿದ್ದಾಳೆ. ಆಕೆಯ ರೇಖಾಚಿತ್ರ ಬಿಡಿಸಲಾಗಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಲಾಗಿದೆ. ಶೀಘ್ರವೇ ಚೀನಿ ಮಹಿಳೆಯನ್ನು ಪತ್ತೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಡಿಯಿಂದ ಬೆಂಗಳೂರು ನೀರು ಶುದ್ಧೀಕರಣ ಘಟಕಗಳು, ಬೋರ್ ವೆಲ್ ಅಕ್ರಮ ಸಂಬಂಧ ಬಿಬಿಎಂಪಿಗೆ ನೋಟಿಸ್