ನವದೆಹಲಿ : ನಿನ್ನೆ ದೆಹಲಿಯಲ್ಲಿ ಸ್ಪೈಸ್ ಜೆಟ್ ಏರ್ಲೈನ್ಸ್ ಸಿಬ್ಬಂದಿಗಳ ಎಡವಟ್ಟಿನಿಂದ ಪ್ರಯಾಣಿಕರು ವಿಮಾನದಲ್ಲೇ 10 ಗಂಟೆ ಕಾಲ ಕಳೆದು ಪ್ರಯಾಣಿಕರನ್ನು ವಿಮಾನದಲ್ಲಿ ಕೂಡಿಟ್ಟು ಕಾಟ ನೀಡಿದ್ದಾರೆ ಎನ್ನಲಾಗಿದೆ.SG8151 ವಿಮಾನದಲ್ಲಿ ಈ ಒಂದು ಘಟನೆ ನಡೆದಿದೆ. ತಾಂತ್ರಿಕ ದೂರ ಎಂದು ಏರ್ಪೋರ್ಟ್ ನಲ್ಲಿ ವಿಮಾನ ನಿಂತಿದೆ.
ದೆಹಲಿಯಿಂದ ಬೆಂಗಳೂರಿಗೆ ವಿಮಾನ ಆಗಮಿಸಬೇಕಿತ್ತು. ಆದರೆ ತಾಂತ್ರಿಕ ದೋಷ ಎಂದು ಏರ್ಪೋರ್ಟ್ ನಲ್ಲಿ ವಿಮಾನ ನಿಂತಿದೆ. ನಿನ್ನೆ ರಾತ್ರಿ 7.40ಕ್ಕೆ ದೆಹಲಿಯಿಂದ ಟೆಕ್ ಆಫ್ ಆಗಬೇಕಿತ್ತು. ಆದರೆ 10 ಗಂಟೆಗಳು ಕಳೆದರೂ ಇನ್ನೂ ವಿಮಾನ ಟೆಕ್ ಆಫ್ ಆಗಿಲ್ಲ. ವಿಮಾನದಲ್ಲೇ ಕುಳಿತು 60 ಮಂದಿ ಪ್ರಯಾಣಿಕರು ಸುಸ್ತಾಗಿದ್ದಾರೆ. ಬೋರ್ಡಿಂಗ್ ಪಾಸ್ ಮಾಡಿ ಸಿಬ್ಬಂದಿ ಕೂರಿಸಿದ್ದಾರೆ. ಸೂಕ್ತ ಮಾಹಿತಿ ನೀಡಿದೆ ಕೂರಿಸಿದ್ದಕ್ಕೆ ಪ್ರಯಾಣಿಕರು ಆಕ್ರೋಶ.