ಬೆಂಗಳೂರು: ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪೂರ್ವ ಕರಾವಳಿ ರೈಲ್ವೆಯು ವಿಶಾಖಪಟ್ಟಣಂ-ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ.
ರೈಲು ಸಂಖ್ಯೆ 08549/08550 ವಿಶಾಖಪಟ್ಟಣಂ-ಎಸ್ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ಹೋಳಿ ವಿಶೇಷ ರೈಲು (2 ಟ್ರಿಪ್).
ರೈಲು ಸಂಖ್ಯೆ 08549 ಮಾರ್ಚ್ 16 ಮತ್ತು 23, 2025 ರಂದು ಮಧ್ಯಾಹ್ನ 3:30ಕ್ಕೆ ವಿಶಾಖಪಟ್ಟಣಂನಿಂದ ಹೊರಟು, ಮರುದಿನ ಮಧ್ಯಾಹ್ನ 12.45ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಕ್ಕೆ ಆಗಮಿಸಲಿದೆ.
ಹಿಂದಿರುಗುವ ಮಾರ್ಗದಲ್ಲಿ ರೈಲು ಸಂಖ್ಯೆ 08550 ಮಾರ್ಚ್ 17 ಮತ್ತು 24, 2025 ರಂದು ಮಧ್ಯಾಹ್ನ 3.50ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಹೊರಟು, ಮರುದಿನ ಮಧ್ಯಾಹ್ನ 12:30ಕ್ಕೆ ವಿಶಾಖಪಟ್ಟಣಂ ತಲುಪಲಿದೆ.
ಮಾರ್ಗಮಧ್ಯೆ, ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ದುವ್ವಾಡ, ಅನಕಪಲ್ಲಿ, ಸಾಮಲ್ಕೊಟ್, ರಾಜಮಂಡ್ರಿ, ಎಲೂರು, ವಿಜಯವಾಡ, ಒಂಗೋಲ್, ನೆಲ್ಲೂರು, ಗುಡೂರು, ಪೆರಂಬೂರ್, ಅರಕ್ಕೋಣಂ, ಕಟಪಾಡಿ, ಜೋಲಾರ್ ಪೆಟ್ಟೈ, ಕುಪ್ಪಂ, ಬಂಗಾರಪೇಟೆ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತವೆ.
ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತವೆ, ಅವುಗಳು: 4 ಎಸಿ ತ್ರಿ ಟೈರ್, 2 ಎಸಿ ತ್ರಿ ಟೈರ್ ಎಕಾನಮಿ, 8 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 1 ಬ್ರೇಕ್, ಲಗೇಜ್ ಕಮ್ ಜನರೇಟರ್ ಕಾರ್ ಮತ್ತು 1 ಸೆಕೆಂಡ್ ಲಗೇಜ್-ಕಮ್-ಬ್ರೇಕ್ ವ್ಯಾನ್/ಅಂಗವಿಕಲ ಬೋಗಿಗಳು ಒಳಗೊಂಡಿರುತ್ತವೆ.
ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ ಅಥವಾ 139ಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಆಗಮನ/ನಿರ್ಗಮನದ ಸಮಯವನ್ನು ಪರಿಶೀಲಿಸಬಹುದು.
ಸಾರ್ವಜನಿಕರೇ ಗಮನಿಸಿ : ವರ್ಷಕ್ಕೊಮ್ಮೆಯಾದರೂ ಈ 10 `ರಕ್ತ ಪರೀಕ್ಷೆ’ ಮಾಡಿಸಲೇಬೇಕು.!