ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷವೇ ಕಳೆದಿದೆ. ಆದರೂ ಕೂಡ ಅಭಿಮಾನಿಗಳಿಗಂತೂ ಇನ್ನೂ ನೆನಪು ಹಾಗೆ ಉಳಿದಿದೆ.
BIGG NEWS: ಪುನೀತ್ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ; ನಟ ಜೂನಿಯರ್ ಎನ್ಟಿಆರ್ ಆಗಮನ
ಈಗಾಗಲೇ ಅಭಿಮಾನಿಗಳು ಅಪ್ಪು ನೆನಪಿಗಾಗಿ ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿಕೊಂಡು ಬಂದಿದ್ದಾರೆ.ಇಂದು ಅವರ ಮೊದಲ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಪ್ಪು ಸಮಾಧಿ ಬಳಿ ಆಗಮಿಸಿದ್ದಾರೆ. ಈ ವೇಳೆ ಅಪ್ಪು ಸಮಾಧಿಗೆ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು.
BIGG NEWS: ಪುನೀತ್ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ; ನಟ ಜೂನಿಯರ್ ಎನ್ಟಿಆರ್ ಆಗಮನ
ಬೆಂಗಳೂರಿನ ಕಂಠೀವರ ಸ್ಟುಡಿಯೋ ಬಳಿಯಿರುವ ಅಪ್ಪು ಸಮಾಧಿ ಬಳಿ ಆಗಮಿಸಿದ ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್, ಅಶ್ವಿನಿ , ಗೀತಾ, ಪುನೀತ್ ಸಹೋದರಿಯರು ಪುನೀತ್ ಪುತ್ರಿ ಸೇರಿದಂತೆ ಕುಟುಂಬದ ಸದಸ್ಯರು ಆಗಮಿಸಿದ್ದರು.ಈ ವೇಳೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕುಟುಂಬಸ್ಥರು ಸಹ ಅಪ್ಪು ನೆನದು ಭಾವುಕರಾಗಿದ್ದಾರೆ. ಇನ್ನು ಅಪ್ಪು ನೋಡಲು ಸಮಾಧಿ ಬಳಿ ಅಭಿಮಾನಿಗಳ ದಂಡು ಹರಿದು ಬಂದಿದೆ.